ಕ್ರಿಕೆಟ್ ಕಲಿ ಶ್ರೀಶಾಂತ್ ಬೆಂಗಳೂರಿನಲ್ಲಿ ಭಾವುಕರಾದ ಕ್ಷಣ

Sreesanth ಬೆಂಗಳೂರು, ಅ.1 : ಅಂದು ಶನಿವಾರ(ಸೆ.29). ಸಮಯ ಬೆಳಗ್ಗೆ 8ಗಂಟೆ. ಆ ಹಳೆಯ ವಿದ್ಯಾರ್ಥಿಯ ಆಗಮನಕ್ಕಾಗಿ ನಗರದ ಫ್ಲಾರೆನ್ಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಕಾತರದಿಂದ ಕಾಯುತ್ತಿದ್ದರು.

ಬೆಳಗ್ಗೆ 8ಕ್ಕೆ ಸರಿಯಾಗಿ ಆ ವಿದ್ಯಾರ್ಥಿ ಬಂದೇ ಬಿಟ್ಟ. ಅವನನ್ನು ಕಂಡ ವಿದ್ಯಾರ್ಥಿಗಳ, ಶಿಕ್ಷಕರ ಆನಂದಕ್ಕೆ ಪಾರವೇ ಇರಲಿಲ್ಲ. ಆ ವಿದ್ಯಾರ್ಥಿ ಮತ್ಯಾರು ಅಲ್ಲ. ನಮ್ಮ ಶ್ರೀಶಾಂತ್! ಕ್ರಿಕೆಟ್‌ ಮೈದಾನದಲ್ಲಿ ಎದುರಾಳಿಯ ವಿಕೆಟ್ ಕಿತ್ತಾಗ, ಶಿಳ್ಳೆ ಹೊಡೆದು ಕುಣಿದಾಡುವ ಮೂಲಕ ತನ್ನ ಆನಂದವನ್ನು ವ್ಯಕ್ತಪಡಿಸಿ, ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಕ್ಕೆ ಎಷ್ಟೋ ಬಾರಿ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿಯ ದಂಡನೆಗೂ ಒಳಗಾದ ಇಪ್ಪತ್ತನಾಲ್ಕರ ಲವಲವಿಕೆಯ ಭಾವನಾತ್ಮಕ ಯುವಕ ಶಾಂತಕುಮಾರನ್ ಶ್ರೀಶಾಂತ್, ಅಂದು ಮಕ್ಕಳ ಜೊತೆ ಬೆರೆತರು. ಶಾಲೆಯ ಆಡಳಿತವರ್ಗದಿಂದ ಸನ್ಮಾನ ಸ್ವೀಕರಿಸಿದರು.

ಅಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಅಂತರಾಷ್ಟ್ರೀಯ ಏಕದಿನ ಪಂದ್ಯವಿತ್ತು. ಶ್ರೀಶಾಂತ್‌ನನ್ನು ನೋಡಲು ವಿದ್ಯಾರ್ಥಿಗಳು, ಶಿಕ್ಷಕರು ಅರ್ಧಗಂಟೆ ಮುಂಚೆಯೇ ಅಲ್ಲಿದ್ದರು. ಟ್ವೆಂಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿದ್ದ ಶ್ರೀಶಾಂತ್, ತನ್ನ ಆನಂದವನ್ನು ವಿದ್ಯಾರ್ಥಿ ಹಾಗೂ ಶಿಕ್ಷಕರೊಂದಿಗೆ ಹಂಚಿಕೊಂಡರು. ಅಲ್ಲಿನ ವಿದ್ಯಾರ್ಥಿಗಳಿಗೆ ಕನಸುಗಳನ್ನು ನನಸು ಮಾಡಿಕೊಳ್ಳುವುದು ಹೇಗೆಂದು ತಿಳಿಸಿದರು. ಲಗಾನ್ ಚಿತ್ರದ 'ಬಾರ್ ಬಾರ್ ಹಮ್..." ಎಂಬ ಗೀತೆಗೆ ಮಕ್ಕಳೊಂದಿಗೆ ಅವರು ಹೆಜ್ಜೆ ಹಾಕಿದರು.

ನಾನು ಮೊದಲ ಬಾರಿಗೆ ಕೇರಳದಿಂದ ಬೆಂಗಳೂರಿಗೆ ಬಂದಾಗ ಇಂಗ್ಲಿಷ್‌ನ Good morning, Excuse me, Thank you, ಮತ್ತು May I come in? ಇವಿಷ್ಟೇ ನನಗೆ ಬರುತ್ತಿದ್ದ ಪದಗಳು. ಆನಂತರ ಈ ಶಾಲೆ ನನಗೆ ಎಲ್ಲವನ್ನೂ ಕಲಿಸಿತು ಎಂದು ತನ್ನ ಹಳೆಯ ದಿನಗಳನ್ನು ನೆನೆಸಿಕೊಂಡು ಶ್ರೀಶಾಂತ್ ಭಾವುಕರಾದರು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+