ಯುವ ಕ್ರೀಡಾಪಟುಗಳಿಗೆ ಪ್ರಕಾಶ್ ಪಡುಕೋಣೆ ಕಿವಿಮಾತು

ಬೆಂಗಳೂರು, ಅ.01 : ಸರ್ಕಾರದ ನಿರ್ಲಕ್ಷ್ಯದಿಂದ ವಿಚಲಿತರಾಗದೆ ಕ್ರೀಡೆಯತ್ತ ಗಮನಹರಿಸಬೇಕೆಂದು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಮಾಜಿ ಚಾಂಪಿಯನ್ ಪ್ರಕಾಶ್ ಪಡುಕೋಣೆ ಯುವ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.

ಒಂದೊಂದು ಕ್ರೀಡೆಗೆ ಒಂದೊಂದು ನೀತಿ ಅನುಸರಿಸುತ್ತಿರುವ ಸರ್ಕಾರವನ್ನು ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ತರಾಟೆಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ, ಅರಳುತ್ತಿರುವ ಪ್ರತಿಭೆಗಳು ತಮ್ಮ ಆಟದ ಮೇಲಷ್ಟೇ ಗಮನಹರಿಸಬೇಕು ಎಂದು ಸೋಮವಾರ ಎಚ್ಚರಿಕೆ ನೀಡಿದರು.

ಯುವ ಕ್ರೀಡಾಳುಗಳು ಸರ್ಕಾರ ತಮ್ಮ ಪ್ರತಿಭೆ ಗುರುತಿಸದಿದ್ದರೆ ವಿಚಲಿತರಾಗದೆ ಇನ್ನೂ ಹೆಚ್ಚಿನದನ್ನು ಸಾಧಿಸುವತ್ತ ಮನಸ್ಸು ಕೇಂದ್ರೀಕರಿಸಬೇಕು. ಆಗ ಪುರಸ್ಕಾರಗಳು ತಾವಾಗೇ ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.

ನಮ್ಮ ಕಾಲದಲ್ಲಿ ಪ್ರತಿಭೆಗೆ ಅಷ್ಟೊಂದು ಮಾನ್ಯತೆ ಇರಲೇ ಇಲ್ಲ. ಮನ್ನಣೆಗಾಗಿ ಕಾಯುತ್ತ ಕುಳಿತಿದ್ದರೆ ಇಷ್ಟೊಂದು ಸಾಧಿಸುತ್ತಲೇ ಇರಲಿಲ್ಲ. ಈಗ ಸರ್ಕಾರದ ನಿರ್ಲಕ್ಷ್ಯದಿಂದ ಪಂಕಜ್ ತಮ್ಮ ಸಿಟ್ಟನ್ನು ಹೊರಗೆಡಹಿದ್ದಾರೆ. ಇದು ನಿಲ್ಲಬೇಕು ಎಂದು ಹೇಳಿದರು.

ಮೊದಲು ಕ್ರೀಡಾಪಟುಗಳಿಂದ ಸಂಘ ನಿರ್ಮಾಣವಾಗಬೇಕು. ಹಿರಿಯ ಆಟಗಾರರು ಮುಂದಾಳತ್ವವಹಿಸಿ ಎಲ್ಲ ಕ್ರೀಡಾಪಟುಗಳ ಪರವಾಗಿ ಮಾನ್ಯತೆಗಾಗಿ ಹೋರಾಟ ಮಾಡಬೇಕು. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಇಂತಿಷ್ಟು ಹಣವನ್ನು ನೀಡುವ ನೀತಿ ಸರ್ಕಾರ ಅನುಸರಿಸಬೇಕು ಎಂದು ಸಲಹೆಯನ್ನು ಪ್ರಕಾಶ್ ನೀಡಿದರು.

ಆದರೆ, ಪಂಕಜ್ ಅಡ್ವಾಣಿ ಅವರ ವಾದವನ್ನು ಅಂತಾರಾಷ್ಟ್ರೀಯ ಈಜುಗಾರ್ತಿಯರಾದ ನಿಶಾ ಮಿಲ್ಲಟ್, ಶಿಖಾ ಟಂಡನ್ ಮತ್ತು ಹಾಕಿಪಟು ಅಶಿಶ್ ಬಲ್ಲಾಳ್ ಸಮರ್ಥಿಸಿಕೊಂಡಿದ್ದಾರೆ.

(ಯುಎನ್ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+