ಟೀವಿ9 'ವಾರಂಟ್'ಗೆ ತತ್ತರಿಸಿದ ಚಂದ್ರಶೇಖರ ಸ್ವಾಮಿ!

ಟೀವಿ9 ವಿರುದ್ಧ ಅರ್ಜಿ ಸಲ್ಲಿಸಿರುವ ಖ್ಯಾತ ಜೋತಿಷಿ ಚಂದ್ರಶೇಖರ ಸ್ವಾಮೀಜಿ, ಸದ್ಯಕ್ಕೆ ಕಾನೂನು ಸಮರದಲ್ಲಿ ಗೆದ್ದಿದ್ದಾರೆ. ಅವರ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡದಂತೆ ಮಂಗಳೂರಿನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ತನ್ನ ವಾರಂಟ್ ಎನ್ನುವ ಕಾರ್ಯಕ್ರಮದಲ್ಲಿ ಟೀವಿ9 ಚಾನೆಲ್, ಇತ್ತೀಚೆಗೆ ಚಂದ್ರಶೇಖರ ಸ್ವಾಮೀಜಿ ಬಗೆಗಿನ ವರದಿಗಳ ಪ್ರಸಾರ ಮಾಡಿತ್ತು. ಚಂದ್ರಶೇಖರ ಸ್ವಾಮೀಜಿ ನಡತೆ ಮತ್ತು ಭ್ರಷ್ಟತೆ ಬಗ್ಗೆ ಟೀವಿ9 ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ವರದಿಗಳಿಂದ ತಮಗೆ ಅವಮಾನವಾಗಿದೆ ಎಂದು ಚಂದ್ರಶೇಖರ ಸ್ವಾಮೀಜಿ, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ವಿಚಾರದಲ್ಲಿ ಮಾನಹಾನಿಯಾಗಿದ್ದು, 50ಲಕ್ಷ ಪರಿಹಾರ ಧನ ಕೊಡಿಸುವಂತೆ ಸ್ವಾಮಿ ಒತ್ತಾಯಿಸಿದ್ದಾರೆ.

ಟೀವಿ9ನ ವಾರಂಟ್ ಕಾರ್ಯಕ್ರಮದ ನಿರ್ಮಾಪಕ ರಮೇಶ್ ಬಾಬು, ನಿರ್ದೇಶಕ ಎಂ.ಎಸ್.ರಾಘವೇಂದ್ರ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆಗೆ ಜಾತಕ ಹೊಂದಿಸಿದ ಚಂದ್ರಶೇಖರ ಸ್ವಾಮೀಜಿ, ಅನೇಕ ಗಣ್ಯ ರಾಜಕಾರಣಿಗಳು ಮತ್ತು ಸಿನಿಮಾ ನಟರ ನಂಟನ್ನು ಹೊಂದಿದ್ದಾರೆ. ದೇಶದ ವಿವಿಧ ಭಾಗಗಳಿಂದ ವಾಸ್ತು ಸಲಹೆ ಮತ್ತು ಭವಿಷ್ಯವನ್ನು ಕೇಳಲು ಅನೇಕರು ಚಂದ್ರಶೇಖರ ಸ್ವಾಮೀಜಿ ಬಳಿಗೆ ಬರುತ್ತಾರೆ.

***

ಭಾರತೀಯ ಸ್ಟೇಟ್ ಬ್ಯಾಂಕ್ ಗೃಹ ಸಾಲ ಬಡ್ಡಿದರ ಇಳಿಕೆ ?

ಹೆಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕುಗಳು ಗೃಹ ಸಾಲ ಬಡ್ಡಿದರ ಇಳಿಕೆ ಮಾಡಿದ ನಂತರ ಈಗ, ಎಸ್ ಬಿಐ ಸರದಿ.

ಮುಂಬರುವ ದಿನಗಳಲ್ಲಿ ಸಾಲನೀತಿ ಪರಾಮರ್ಶೆಯಾಗಲಿದ್ದು, ಆ ಸಂದರ್ಭದಲ್ಲಿ ಬಡ್ಡಿದರ ಇಳಿಸುವ ಬಗ್ಗೆ ಯೋಚಿಸಲಾಗುತ್ತದೆ. ಇಲ್ಲವೇ ಹಬ್ಬದ ನಿಮಿತ್ತ ಒಂದು ಅಥವಾ ಎರಡು ತಿಂಗಳು ಡಿಸ್ಕೌಂಟ್ ನೀಡಲಾಗುತ್ತದೆ. ಆದರೆ ಬಡ್ಡಿದರ ಏರಿಸುವ ಪ್ರಶ್ನೆಯೇ ಇಲ್ಲ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನ ಅಧ್ಯಕ್ಷ ಒ.ಪಿ. ಭಟ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+