ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಸೆನ್ನೆಲ್ ಬ್ರಾಡ್ ಬ್ಯಾಂಡ್ ಸೇವೆ : ಗ್ರಾಹಕರಿಗೆ ಶುಭಸುದ್ದಿ

By Staff
|
Google Oneindia Kannada News

ಬೆಂಗಳೂರು, ಅ.01 : ಅಕ್ಟೋಬರ್ ತಿಂಗಳಾಂತ್ಯದೊಳಗೆ ರಾಜಧಾನಿ ನಗರ ಬೆಂಗಳೂರಿನಲ್ಲಿ ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಸಾಮಾರ್ಥ್ಯ 2ಲಕ್ಷಕ್ಕೆ ಹೆಚ್ಚಲಿದೆ ಎಂದು ಬೆಂಗಳೂರು ಟೆಲಿಕಾಂ ಜಿಲ್ಲೆಯ ಪ್ರಿನ್ಸಿಪಲ್ ಜನರಲ್ ಮ್ಯಾನೇಜರ್ ಸುಭೇಂದು ಘೋಷ್ ಸೋಮವಾರ(ಅ.01) ಹೇಳಿದ್ದಾರೆ.

ಬಿಎಸ್ಎನ್ಎಲ್ ಏಳುವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಸದ್ಯದ ಬ್ರಾಡ್ ಬ್ಯಾಂಡ್ ಸಾಮಾರ್ಥ್ಯ 1.62 ಲಕ್ಷವಿದ್ದು 1.15 ಲಕ್ಷ ಸಂಪರ್ಕಗಳನ್ನು ನೀಡಲಾಗಿದೆ. ಬ್ರಾಡ್ ಬ್ಯಾಂಡ್ ಸಾಮಾರ್ಥ್ಯ ಹೆಚ್ಚಳದಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.

ಬ್ರಾಡ್ ಬ್ಯಾಂಡ್ ಸಂಪರ್ಕಕ್ಕಾಗಿ 20 ಸಾವಿರ ಅರ್ಜಿಗಳು ಬಿಎಸ್ಎನ್ಎಲ್ ಮುಂದಿವೆ. ಈ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ನವೆಂಬರ್ ನಂತರ ಬೇಡಿಕೆ ಆಧಾರದ ಮೇಲೆ ಬ್ರಾಂಡ್ ಬ್ಯಾಂಡ್ ಸಂಪರ್ಕ ನೀಡುತ್ತೇವೆ. ಮಾರ್ಚ್ 2008ರ ವೇಳೆಗೆ ಬ್ರಾಡ್ ಬ್ಯಾಂಡ್ ಸಾಮಾರ್ಥ್ಯವನ್ನು 3.42 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಬೆಂಗಳೂರಿನಲ್ಲಿ ಐಪಿಟಿವಿ ಕೂಡ ಆರಂಭಿಸಿದ್ದು, 500 ಸಂಪರ್ಕಗಳನ್ನು ನೀಡಲಾಗಿದೆ ಎಂದು ಘೋಷ್ ತಿಳಿಸಿದರು.

ಮೊಬೈಲ್ ಬಳಕೆಯಿಂದ ಸ್ಥಿರ ದೂರವಾಣಿಗಳಿಗೆ ಬೇಡಿಕೆ ಕುಸಿದಿಲ್ಲ. ಬೆಂಗಳೂರು ನಗರದಲ್ಲಿ ಮೊದಲ ಆರು ತಿಂಗಳಲ್ಲಿ 51 ಸಾವಿರ ಸಂಪರ್ಕಗಳನ್ನು ನೀಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 44ಸಾವಿರ ಸಂಪರ್ಕಗಳನ್ನು ನೀಡಲಾಗಿತ್ತು ಎಂದು ಘೋಷ್ ವಿವರಿಸಿದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X