ನಮ್ಮ ವಿಶ್ವನಾಥನ್ ಆನಂದ್ ಮತ್ತೆ ಚದುರಂಗ ಸಾಮ್ರಾಟ
ಮೆಕ್ಸಿಕೋ, ಸೆ.30 : ಭಾರತದ ಖ್ಯಾತ ಚೆಸ್ ಆಟಗಾರ ಗ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ , ವಿಶ್ವ ಚೆಸ್ ಚಾಂಪಿಯನ್ ಷಿಪ್ ಕಿರೀಟವನ್ನು ಧರಿಸಿದ್ದಾರೆ.
ಮೆಕ್ಸಿಕೋ ನಗರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಷಿಪ್ ಸ್ಪರ್ಧೆಯ 14ನೇ ಮತ್ತು ಅಂತಿಮ ಸುತ್ತಿನ ಪಂದ್ಯದಲ್ಲಿ, ಹಂಗೇರಿಯ ಸೂಪರ್ ಗ್ರ್ಯಾಂಡ್ ಮಾಸ್ಟರ್ ಪೀಟರ್ ಲೆಕೋ ಅವರೊಂದಿಗೆ ಡ್ರಾ ಮಾಡಿಕೊಂಡರು. ಪಾಯಿಂಟ್ ಗಳ ಆಧಾರದ ಮೇಲೆ ಆನಂದ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಚಾಂಪಿಯನ್ ಷಿಪ್ ನ 14ಸುತ್ತುಗಳಲ್ಲಿ ಪ್ರಾಬಲ್ಯ ಮೆರೆದ ಆನಂದ್, 4ರಲ್ಲಿ ಗೆದ್ದು , ಒಮ್ಮೆಯೂ ಸೋಲದೆ ಸಾಧನೆ ಮೆರೆದಿದ್ದಾರೆ.
ಆನಂದ್ ಪಾಲಿಗೆ ವಿಶ್ವ ಚೆಸ್ ಕಿರೀಟ ಎರಡನೇ ಬಾರಿ ಲಭಿಸುತ್ತಿದ್ದು, 390.000 ಯುಎಸ್ ಡಾಲರ್ ಬಹುಮಾನ ಆನಂದ್ ಪಾಲಾಗಿದೆ.
ಈ ಮುಂಚೆ 2000ದಲ್ಲಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
(ಏಜನ್ಸೀಸ್ )


Click it and Unblock the Notifications
