• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಡಿಎಸ್ ಫಸ್ಟ್ ; ಕಾಂಗ್ರೆಸ್ ನೆಕ್ಸ್ಟ್ ; ಬಿಜೆಪಿ ಲಾಸ್ಟ್ !!!

By Staff
|

ಬೆಂಗಳೂರು, ಸೆ.30 : ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ, ಆರಂಭಿಕ ವರದಿಗಳ ಪ್ರಕಾರ ಜಾತ್ಯತೀತ ಜನತಾದಳ(ಜೆಡಿಎಸ್)ಮೇಲುಗೈ ಸಾಧಿಸಿದೆ. ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು, ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಮತ ಎಣಿಕೆ ಮುಂದುವರೆದಿದ್ದು ಭಾನುವಾರ(ಸೆ.30) ಸಂಜೆ ವೇಳೆಗೆ ಅಂತಿಮ ಚಿತ್ರಣ ಹೊರಬೀಳಲಿದೆ.

ಕೈಗೆ ಅವಮಾನ : ಗುಲ್ಭರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಮುಖಭಂಗವಾಗಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಲ್ಲಿರುವ ಗುರುಮಿಟ್ಕಲ್ ನಗರ ಪಂಚಾಯ್ತಿ, ಕಾಂಗ್ರೆಸ್ ಕೈ ತಪ್ಪಿದೆ. ಇದು ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುವ ವಿಧಾನಸಭಾ ಕ್ಷೇತ್ರವೂ ಹೌದು. ಬೀದರ್, ರಾಯಚೂರು, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಗೌಡರಿಗೆ ಹರ್ಷ : ಹಾಸನ ಜಿಲ್ಲೆಯ ಹೊಳೆನರಸೀಪುರ ಪುರಸಭೆಯ ಎಲ್ಲಾ 23ವಾರ್ಡ್ ಗಳು ಜೆಡಿಎಸ್ ಪಾಲಾಗಿವೆ. ಅರಸೀಕರೆ ಸಿಎಂಸಿ ಸಹಾ ಜೆಡಿಎಸ್ ಪಾಲಾಗಿದೆ. ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಗುಲ್ಬರ್ಗ ಮತ್ತು ಕೋಲಾರ ಜಿಲ್ಲೆಗಳಲ್ಲಿ ಜೆಡಿಎಸ್ ಮುಂದಿದೆ.

ಅಲ್ಲಲ್ಲಿ ಬಿಜೆಪಿ : ಉಡುಪಿ, ಪುತ್ತೂರು, ಬಂಡ್ವಾಳ, ಕುಂದಾಪುರ, ಕಾರವಾರ, ಶಿವಮೊಗ್ಗ, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿ ಬಿಜೆಪಿ ಸಾಧನೆ ತೋರಿಸಿದೆ.

ಬಿಜಾಪುರ ಜಿಲ್ಲೆಯಲ್ಲಿ ಸಣ್ಣ ಪುಟ್ಟ ಅಹಿತಕರ ಘಟನೆಗಳ ಬಿಟ್ಟರೆ, ರಾಜ್ಯದೆಲ್ಲೆಡೆ ಮತ ಎಣಿಕೆ ಶಾಂತವಾಗಿ ನಡೆದಿದೆ. ಬಿಜಾಪುರದಲ್ಲಿ ಮತಎಣಿಕೆ ಕೇಂದ್ರಕ್ಕೆ ಅಕ್ರಮವಾಗಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ನುಗ್ಗಲು ಯತ್ನಿಸಿದಾಗ, ತುಸು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ರಾಜ್ಯದ 209 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ 4820ವಾರ್ಡ್ ಗಳಲ್ಲಿ 25ಸಾವಿರ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು.

(ಯುಎನ್ಐ)

ಪೂರಕ ಸುದ್ದಿ :

ರಾಜ್ಯದೆಲ್ಲೆಡೆ ಮತ ಎಣಿಕೆ ಆರಂಭ;ಮೈಸೂರು 'ಕೈ'ವಶ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more