ಯಶವಂತಪುರ ಕಂಪ್ಯೂಟರ್ ಕೇಂದ್ರದ ಸಿಬ್ಬಂದಿ ತಣ್ಣಗಿರಲಿ!
ಬೆಂಗಳೂರು, ಸೆಪ್ಟೆಂಬರ್ 07 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂಪ್ಯೂಟರ್ ತರಬೇತಿ ಸಂಸ್ಥೆ, ಹಲವಾರು ನಿರುದ್ಯೋಗಿಗಳ ಪಾಲಿಗೆ ಆಸರೆಯ ಉಸಿರು. ಇಲ್ಲಿ ತರಬೇತಿ ಪಡೆದವರೆಲ್ಲಾ ಇಂದು ನೆಲೆ ಕಂಡುಕೊಂಡಿದ್ದಾರೆ.
ಇಂದು ಸಣ್ಣಪುಟ್ಟ ಸಂಸ್ಥೆಗಳಲ್ಲೂ ಕೆಲಸಬೇಕೆಂದರೆ ಕಂಪ್ಯೂಟರ್ ಜ್ಞಾನ ಇದೆಯಾ? ಎಂದು ಕೇಳುತ್ತಾರೆ. ಉಳ್ಳವರ ಕತೆ ಬಿಡಿ. ಆರ್ಥಿಕವಾಗಿ ಹಿಂದುಳಿದವರು, ಯಾವುದೇ ದೊಡ್ಡ ಡಿಗ್ರಗಳಿಲ್ಲದವರ ಪರಿಸ್ಥಿತಿ ತೀರಾ ಶೋಚನೀಯ. ಅಂತಹವರಿಗಾಗಿಯೆ ಮಹಾನಗರ ಪಾಲಿಕೆ, ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ತೆರೆದಿದೆ. ನಗರದ ಬೇರೆಬೇರೆ ಕಡೆಗಳಲ್ಲಿನ ಸಂಸ್ಥೆಗಳ ಕಾರ್ಯವೈಖರಿ ಹೇಗಿದೆಯೋ ಗೊತ್ತಿಲ್ಲ. ಆದರೆ ಯಶವಂತಪುರದಲ್ಲಿನ ಕಂಪ್ಯೂಟರ್ ಸಂಸ್ಥೆ ಮಾತ್ರ ಪ್ರಶಂಸೆಗೆ ಪಾತ್ರವಾಗುತ್ತದೆ.
ಅಲ್ಲಿ ಬೆಳಗ್ಗೆ 7ರಿಂದ ರಾತ್ರಿ 9ರ ತನಕ 400 ಅಭ್ಯರ್ಥಿಗಳು ತರಬೇತಿಯಲ್ಲಿ ನಿರತರಾಗಿರುತ್ತಾರೆ. ನುರಿತ ಶಿಕ್ಷಕರು, ಗುಣಮಟ್ಟದಲ್ಲಿ ರಾಜಿ ಇಲ್ಲದ ಶಿಕ್ಷಣ, ಇದೆಲ್ಲಾ ಇಲ್ಲಿ ಉಚಿತವಾಗಿ ದೊರೆಯುತ್ತವೆ. ನಗರದ 12 ಕಂಪ್ಯೂಟರ್ ಕೇಂದ್ರಗಳ ಪೈಕಿ ಇಲ್ಲಿನ ಸಂಸ್ಥೆ ನಂಬರ್ ವನ್. ಈ ಸಂಸ್ಥೆಯಲ್ಲಿ ಶೇ.75ರಷ್ಟು ಗೃಹಿಣಿಯರು, ಯುವತಿಯರೇ ಇದ್ದಾರೆ. ಇಲ್ಲಿ ತರಬೇತಿ ಮುಗಿಸಿದ ಎಲ್ಲರಿಗೂ ಕೆಲಸ ಗ್ಯಾರಂಟಿ ಅನ್ನುತ್ತಾರೆ ಸಂಸ್ಥೆಯ ಸಿಬ್ಬಂದಿ ವರ್ಗ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications