ಪಿಎಸೈ ವೆಂಕಟೇಶ್ ಸತ್ತದ್ದು ನಕ್ಸಲರಿಂದಲ್ಲ : ಸ್ಪಷ್ಟೀಕರಣ
ಆಗುಂಬೆ ಸಮೀಪದ ಕಾಡಿನಲ್ಲಿ ಇತ್ತೀಚೆಗೆ ಮೃತಪಟ್ಟ ಪಿಎಸ್ಐ ವೆಂಕಟೇಶ್ ಸಾವಿಗೂ ನಮಗೂ ಸಂಬಂಧವಿಲ್ಲ ಎಂದು ಸಿಪಿಐ(ಮಾವೋವಾದಿ) ಹೇಳಿದೆ.
ವೆಂಕಟೇಶ್ ಸಾವನ್ನಪ್ಪಿದ್ದು ಪೊಲೀಸರ ಗುಂಡಿನಿಂದಲೇ ಹೊರತು, ನಕ್ಸಲರಿಂದಲ್ಲ. ಈ ಸಾವನ್ನು ನಕ್ಸಲರ ತಲೆಗೆ ಕಟ್ಟಲು ಪೊಲೀಸರು ಯತ್ನಿಸಿದ್ದಾರೆ. ಮಾಹಿತಿ ಖಚಿತ ಪಡಿಸಿಕೊಳ್ಳಲು ತಡವಾದ ಕಾರಣ, ಸ್ಪಷ್ಟೀಕರಣ ನೀಡಲು ತಡವಾಗಿದೆ ಎಂದು ಮಾವೋವಾದಿಗಳು ಹೇಳಿದ್ದಾರೆ.
***
ಹನೀಫ್ ಮೇಲೆ ಮುಂದುವರಿದ ಅನುಮಾನ
ಗ್ಲಾಸ್ಗೋ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಡಾ.ಹನೀಫ್ ಕಳಂಕ ತೊಳೆದು ಕೊಂಡು ತವರಿಗೆ ಮರಳಿದ್ದರೂ, ಆಸ್ಟ್ರೇಲಿಯಾ ಪೊಲೀಸರು ಅನುಮಾನದಿಂದಲೇ ನೋಡುತ್ತಿದ್ದಾರೆ.
ಡಾ.ಹನೀಫ್ ಅವರ ಬ್ಯಾಂಕ್ ವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಹನೀಫ್ ಗೆ ಅಲ್ ಖೈದಾದಂತಹ ಸಂಘಟನೆ ಜೊತೆ ಸಂಪರ್ಕ ಇದೆಯೇ ಇಲ್ಲವೇ ಎಂಬ ಬಗ್ಗೆ ಅವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.












Click it and Unblock the Notifications