ಎನ್‌ಕೌಂಟರ್‌ಗೆ ಖಂಡನೆ : ಇ-ಮೇಲ್‌ನಲ್ಲಿ ನಕ್ಸಲರ ಪತ್ರ!
ಇತ್ತೀಚೆಗೆ ಮೆಣಸಿನಹಾಡ್ಯದಲ್ಲಿ ನಡೆದದ್ದು ; ನಕಲಿ ಎನ್ ಕೌಂಟರ್. ಈ ಕೃತ್ಯಕ್ಕೆ ತಕ್ಕ ಬೆಲೆಯನ್ನು ಸರ್ಕಾರ ತೆರಬೇಕಾಗುತ್ತದೆ ಎಂಬ ಬೆದರಿಕೆಯುಳ್ಳ ಇಮೇಲ್‌ಗಳು ವಿವಿಧ ಪತ್ರಿಕಾ ಕಚೇರಿಗೆ ಬರುತ್ತಿವೆ.
ಪತ್ರ ಬರೆದಿರುವ ಗಂಗಾಧರ ಎಂಬಾತ, ತನ್ನನ್ನು ಮಾವೋವಾದಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಂದು ಗುರ್ತಿಸಿಕೊಂಡಿದ್ದಾರೆ. ನಕ್ಸಲರನ್ನು ಸರ್ಕಾರ ಕೆರಳಿಸಬಾರದು ಎಂಬ ಸಲಹೆ ಪತ್ರದಲ್ಲಿದೆ ಎನ್ನಲಾಗಿದೆ.
***
ಸಾ.ರಾ.ಗೋವಿಂದ್ ಜನ್ಮದಿನ
ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ, ನಿರ್ಮಾಪಕ, ವಿತರಕ, ನಟ, ಕನ್ನಡ ಹೋರಾಟಗಾರ ಹೀಗೆ ಅನೇಕ ಗುಣವಾಚಕಗಳನ್ನು ತಮ್ಮ ಹೆಸರಿನ ಜೊತೆ ಅಂಟಿಸಿಕೊಂಡಿರುವ ಸಾ.ರಾ.ಗೋವಿಂದ್, ಶುಕ್ರವಾರ ಖುಷಿಯಲ್ಲಿದ್ದಾರೆ. ಕಾರಣ: ಇಂದು ಅವರ ಹುಟ್ಟುಹಬ್ಬ.
***
ಬೆಳಗಾಂನ್ನು ಬೆಳಗಾವಿ ಮಾಡಿದರೆ ಸಮ್ಮನಿರುವುದಿಲ್ಲ
ಬೆಳಗಾವಿ ವಿಷಯದಲ್ಲಿ ಪದೇಪದೇ ತಂಟೆ ಮಾಡುತ್ತಿರುವ ಮಹಾರಾಷ್ಟ್ರ, ಈಗ ಇನ್ನೊಂದು ತಂಟೆ ತೆಗೆದಿದೆ.
ಬೆಳಗಾಂನ್ನು ಬೆಳಗಾವಿ ಎಂದು ಬದಲಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಮಹಾರಾಷ್ಟ್ರ ಗಡಿ ತಜ್ಞರ ಸಮಿತಿ ಖಂಡಿಸಿದೆ. ಈ ವಿಚಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಅದು ಎಚ್ಚರಿಸಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದ ಪ್ರಕರಣ ನ್ಯಾಯಾಲಯದಲ್ಲಿದೆ. ಈಹೊತ್ತಿನಲ್ಲಿ ಬೆಳಗಾಂ ಹೆಸರು ಬದಲಿಸುವುದು ಮತ್ತು ಬೆಳಗಾಂನಲ್ಲಿ ಸುವರ್ಣ ವಿಧಾನಸೌಧ ಕಟ್ಟಲು ಮುಂದಾಗಿರುವ ಕರ್ನಾಟಕದ ಕ್ರಮ ಖಂಡನೀಯ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಗಡಿ ತಜ್ಞರ ಸಮಿತಿ ಹೇಳಿದೆ.
ಮಹಾರಾಷ್ಟ್ರ ತಕರಾರಿಗೆ ಕನ್ನಡ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.











Click it and Unblock the Notifications