ಸ್ಮಾರ್ಟ್ ಆಗಿ ಕೆಲಸ ಮಾಡುತ್ತಿರುವ ಬಿಎಮ್‌ಟಿಸಿ
ಬೆಂಗಳೂರು : ವಿದ್ಯಾರ್ಥಿಗಳಿಗಾಗಿ ಮಾತ್ರ ಸೀಮಿತವಾಗಿದ್ದ ಸ್ಮಾರ್ಟ್ ಕಾರ್ಡನ್ನು ಇತರ ಪ್ರಯಾಣಿಕರಿಗೂ ವಿಸ್ತರಿಸುವ ಯೋಜನೆಯನ್ನು ಬಿಎಮ್‌ಟಿಸಿ ಹಾಕಿಕೊಂಡಿದೆ.
ಈ ಇ-ಕಾರ್ಡ್ನ್ನು ಬಸ್ ಪಾಸ್ ಮಾತ್ರವಲ್ಲದೆ ವಿವಿಧ ಉದ್ದೇಶಗಳಿಗೆ ಬಳಸಬಹುದು. ಇ-ಕಾರ್ಡ್‌ಗೆ ಹಣ ವರ್ಗಾಯಿಸಿಕೊಂಡು ಬಿಎಮ್‌ಟಿಸಿಯೊಂದಿಗೆ ಒಡಂಬಡಿಕೆ ಮಾಡಿಕೊಂಡ ಅಂಗಡಿಗಳಿಂದ ಸಾಮಾನುಗಳನ್ನು ಕೊಳ್ಳಬಹುದು. ಎಲೆಕ್ಟ್ರಿಸಿಟಿ, ನೀರಿನ ಬಿಲ್ ಕಟ್ಟುವ ಅನುಕೂಲಗಳೂ ಸಾರ್ವಜನಿಕರಿಗೆ ದೊರೆಯಲಿದೆ.
ಬೆಂಗಳೂರಿನಲ್ಲಿ ಪ್ರಾರಂಭಿಸುತ್ತಿರುವ ಟ್ರಾಫಿಕ್ ನಿರ್ವಹಣಾ ಕೇಂದ್ರಗಳ ಭಾಗವಾಗಿ ಸ್ಮಾರ್ಟ್ ಕಾರ್ಡ್ ಕೂಡ ಜಾರಿಗೆ ಬರಲಿದೆ.
ಸಾರ್ವಜನಿಕರು ನಡೆಸುವ ಹಣಕಾಸು ವಹಿವಾಟನ್ನು ನಿರ್ವಹಿಸಲು ಬ್ಯಾಂಕ್‌ನೊಂದಿಗೆ ಚರ್ಚೆ ನಡೆಯುತ್ತಿದ್ದು ಈ ವರ್ಷದ ಕೊನೆಯಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ಬಿಎಮ್‌ಟಿಸಿಯ ರಕ್ಷಣೆ ಮತ್ತು ಜಾಗೃತ ವಿಭಾಗದ ನಿರ್ದೇಶಕ ಪಿ.ಎಸ್.ಸಂಧು ಹೇಳಿದ್ದಾರೆ.
ಮುಂಬೈನ ಬೆಸ್ಟ್ ಬಸ್ ವ್ಯವಸ್ಥೆಗೆ ಕಾರ್ಡನ್ನು ವಿತರಿಸಿರುವ ಕೈಝನ್ ಆಟೋಮೇಷನ್ ಸರ್ವಿಸ್‌ನ ಪ್ರಕಾಶ್ ಕಾಮತ್‌ರ ಸಲಹೆಯನ್ನು ಈ ಹೊಸ ಯೋಜನೆಗಾಗಿ ಪಡೆಯಲಾಗಿದೆ.
ಆರಂಭದಲ್ಲಿ ಅರ್ಜಿಗಾಗಿ 35 ರು.ಗಳನ್ನು ಸ್ಮಾರ್ಟ್ ಕಾರ್ಡ್‌ಗಾಗಿ ಪಡೆಯಲಾಗುವುದು ಮತ್ತು ಪ್ರತಿ ವಹಿವಾಟಿಗೆ 5 ರು. ಸೇವಾಶುಲ್ಕವನ್ನು ವಿಧಿಸಲಾಗುವುದು. ಇದರೊಂದಿಗೆ ಕಾರ್ಡ್‌ನ ಪರಿಶೀಲನೆಗೆ 10 ಸಾವಿರ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸಂಧು ಹೇಳಿದ್ದಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications