ಪೂಜಾ ಪೂರ್ಣ ಬೆತ್ತಲಾಗದಿರಲಿ.. ನ್ಯಾಯ ದೊರಕಲಿ!
ನವದೆಹಲಿ : ಕೆಲವರು ಹೀಗೂ ಮಾಡುತ್ತಾರೆ. ಹೀಗೆ ಮಾಡುವುದು ಅವರಿಗೆ ಅನಿವಾರ್ಯವಂತೆ! ಇಷ್ಟಕ್ಕೂ ಇಲ್ಲಿ ಏನಾಗಿದೆ ಅಂದರೆ, ಹೆಣ್ಣು ಮಗಳೊಬ್ಬಳು ಅರೆಬೆತ್ತಲೆಯಾಗಿ ಓಡಿ, ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾಳೆ!
ವರದಕ್ಷಿಣೆ ದೂರನ್ನು ದಾಖಲಿಸಿಕೊಳ್ಳದ ಪೊಲೀಸರ ವಿರುದ್ಧ ಸಿಡಿಮಿಡಿಕೊಂಡಿರುವ, ರಾಜ್‌ಕೋಟ್‌ನ ಪೂಜಾ ಚೌಹಾನ್, ಅರೆಬೆತ್ತಲೆಯಾಗಿ ರಸ್ತೆಯಲ್ಲಿ ಓಡಿದ ನಾರಿ.
ನಾನು ವರದಕ್ಷಿಣೆ ಕಿರುಕುಳದಿಂದ ನೊಂದಿದ್ದೇನೆ. ಎಂಟು ತಿಂಗಳ ಹಿಂದೆ ಹೆಣ್ಣು ಮಗುವಿಗೆ ನಾನು ಜನ್ಮ ನೀಡಿದೆ. ಅಂದಿನಿಂದ ಕಿರುಕುಳ ತಪ್ಪಿಲ್ಲ. ಈ ಬಗ್ಗೆ ನಾನು ನೀಡಿದ ದೂರನ್ನು ಪೊಲೀಸರು ಸ್ವೀಕರಿಸಲಿಲ್ಲ . ಹೀಗಾಗಿ ಅರೆನಗ್ನಳಾಗಿ ಓಡಿ, ನನ್ನ ಹೋರಾಟ ಮುಂದುವರೆಸಿದ್ದೇನೆ. ಈಗಲೂ ಪೊಲೀಸರು ಗಮನಹರಿಸದಿದ್ದರೆ, ಪೂರ್ತಿ ಬೆತ್ತಲೆಯಾಗಿ ಓಡುವುದಾಗಿ ಪೂಜಾ ಎಚ್ಚರಿಸಿದ್ದಾರೆ.
ಪ್ರಸ್ತುತ ಪೂಜಾಗೆ ನೆರವು ನೀಡುವುದಾಗಿ ಮಹಿಳಾ ಆಯೋಗ ಮುಂದೆ ಬಂದಿದೆ. ಪೂಜಾರ ವರದಕ್ಷಿಣೆ ದೂರು ಸ್ವೀಕರಿಸಲು ಪೊಲೀಸರು ನಿರ್ಧರಿಸಿದ್ದಾರೆ. ಜೊತೆಗೆ ಅರೆ ಬೆತ್ತಲೆಯಾಗಿ ಓಡಿದ್ದಕ್ಕಾಗಿ, ಪೂಜಾ ವಿರುದ್ಧ ಸಹಾ ದೂರು ದಾಖಲಿಸುವುದಾಗಿ ಪೊಲೀಸರು ಹೇಳಿದ್ದಾರೆ.
ಪೂಜಾ ಮಾಡಿದ್ದು ಸರಿಯೋ? ತಪ್ಪೋ?
(ಏಜನ್ಸೀಸ್)












Click it and Unblock the Notifications