ಮಾಹಿತಿ ಹಕ್ಕು ಕುರಿತು ತುಮಕೂರಿನಲ್ಲಿ ಕಾರ್ಯಾಗಾರ
ತುಮಕೂರು: ನಗರದಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ವಿಶೇಷ ತರಬೇತಿ ಕಾರ್ಯಾಗಾರವನ್ನು ಶನಿವಾರ ಏರ್ಪಡಿಸಲಾಗಿದೆ.
ನಗರದ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆ ಮತ್ತು ಎಲ್.ಐ.ಸಿ. ಪ್ರತಿನಿಧಿಗಳ ಸಂಘ, ತುಮಕೂರು ಶಾಖೆ ಸಂಯುಕ್ತಾಶ್ರಯದಲ್ಲಿ, ಈ ಕಾರ್ಯಾಗಾರ ನಡೆಯಲಿದೆ.
ಸೋಮೇಶ್ವರಪುರಂ ಮುಖ್ಯರಸ್ತೆಯಲ್ಲಿರುವ ಶ್ರೀ ಗಾಯತ್ರಿ ಸಮುದಾಯ ಭವನದಲ್ಲಿ ಬೆಳಗ್ಗೆ
9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಕಾರ್ಯಾಗಾರ ನಡೆಯಲಿದೆ.
ಬೆಂಗಳೂರಿನ ಕ್ರಿಯೇಟ್ ( ಗ್ರಾಹಕರ ಹಕ್ಕು, ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್ ) ಸಂಸ್ಥೆಯ ಪ್ರಮುಖರೂ, ಎಲ್.ಐ.ಸಿ. ಗ್ರಾಹಕ ವ್ಯವಹಾರಗಳ ಸಮಿತಿಯ ಸದಸ್ಯರೂ, ಗ್ರಾಹಕ ವಿಷಯಗಳ ಅಂಕಣಕಾರರೂ ಆಗಿರುವ ವೈ. ಜಿ. ಮುರಳೀಧರನ್ ಅವರು ಈ ಕಾರ್ಯಾಗಾರವನ್ನು ನಡೆಸಿಕೊಡುವರು ಎಂದು ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯ ಆರ್. ವಿಶ್ವನಾಥನ್ ಅವರು ತಿಳಿಸಿದ್ದಾರೆ.
ಕಾರ್ಯಾಗಾರದಲ್ಲಿ ಭಾಗವಹಿಸಲಿಚ್ಛಿಸುವವರು ಪೂರ್ವಭಾವಿಯಾಗಿಯೇ ತಮ್ಮ ಹೆಸರುಗಳನ್ನು ಆರ್. ವಿಶ್ವನಾಥನ್ (9448416841 ) ಅಥವಾ ಜೀವವಿಮಾ ಪ್ರತಿನಿಧಿಗಳ ಸಂಘದ ಶಾಖೆ ೧ ರ ಕಾರ್ಯದರ್ಶಿ ಗಿರಿರಾಜಯ್ಯ (9448371088 ) , ಶಾಖೆ- ೨ ರ ಕಾರ್ಯದರ್ಶಿ ಶಂಭು (9980556993 ) ಅವರಲ್ಲಿ ನೋಂದಾಯಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications