ಕೆಂಪೇಗೌಡ, ಸರ್ಎಂವಿ ಹೆಸರಿನ ಜಿಲ್ಲೆಗಳನ್ನು ಸ್ವಾಗತಿಸಿರಿ
ಬೆಂಗಳೂರು : ರಾಮನಗರ ಹಾಗೂ ಚಿಕ್ಕಬಳ್ಳಾಪುರವನ್ನು ಕ್ರಮವಾಗಿ ನಾಡಪ್ರಭು ಕೆಂಪೇಗೌಡ ಹಾಗೂ ಸರ್.ಎಂ.ವಿಶ್ವೇಶ್ವರಯ್ಯರವರ ಹೆಸರಿನಲ್ಲಿ ನೂತನ ಜಿಲ್ಲೆಗಳೆಂದು ಜೂನ್ 29ರಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಘೋಷಿಸುವ ಸಾಧ್ಯತೆಯಿದೆ.
ನೂತನ ರಾಮನಗರ ಜಿಲ್ಲೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ತಾಲೂಕುಗಳು ಸೇರ್ಪಡೆಯಾಗಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಕೋಲಾರ ಜಿಲ್ಲೆಯ ಐದು ತಾಲೂಕುಗಳನ್ನು ಸೇರಿಸಲಾಗುತ್ತದೆ.
ಸಮ್ಮಿಶ್ರ ಸರ್ಕಾರದ ಮುಂದೆ ಮೇಲ್ಕಂಡ ಹೊಸ ಜಿಲ್ಲೆಗಳ ಜತೆಗೆ ಚಿಕ್ಕೋಡಿ ಮತ್ತು ಯಾದಗಿರಿ ಜಿಲ್ಲೆಗಳನ್ನು ರೂಪಿಸುವ ಪ್ರಸ್ತಾಪವಿದ್ದರೂ ಸ್ಥಳೀಯ ರಾಜಕೀಯ ಮುಖಂಡರ ವಿರೋಧದಿಂದಾಗಿ ಆಲೋಚನೆಯನ್ನು ಕೈ ಬಿಡಲಾಗಿದೆ ಎನ್ನಲಾಗಿದೆ.
ದಿವಂಗತ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗಳ ಪುನರ್ ವಿಂಗಡನೆ ಕಾರ್ಯ ನಡೆದಿತ್ತು. ಪಟೇಲರು ಏಳು ಹೊಸ ಜಿಲ್ಲೆಗಳನ್ನು ಸೇರಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ರಾಜ್ಯಕ್ಕೆ ಹೊಸ ಜಿಲ್ಲೆ ಸೇರ್ಪಡೆ: ಹೆಚ್. ಡಿ. ಕುಮಾರ ಸ್ವಾಮಿ












Click it and Unblock the Notifications