ಅಪರ್ಣ ಟಾಕೀಸ್‌ನಲ್ಲಿ ದಾಂಧಲೆ
ಕಾಮಿಡಿ ಟೈಂ ಗಣೇಶ್ ಮತ್ತು ರೇಖಾ ಅಭಿನಯದ ‘ಹುಡುಗಾಟ’ಚಿತ್ರ ಶುಕ್ರವಾರ(ಜೂ.08) ಬಿಡುಗಡೆಯಾಗಿದೆ.
ಚಿತ್ರ ಪ್ರದರ್ಶನದಲ್ಲಿ ಸ್ವಲ್ಪ ಕಾಲ ತಾಂತ್ರಿಕ ದೋಷಗಳು ಉಂಟಾದ ಕಾರಣ ಅಭಿಮಾನಿಗಳು ರೊಚ್ಚಿಗೆದ್ದು, ಬೆಂಗಳೂರಿನ ಅಪರ್ಣ ಚಿತ್ರಮಂದಿರದ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ನಂತರ ಪರಿಸ್ಥಿತಿ ತಿಳಿಯಾಗಿದ್ದು, ಗಲಭೆಗೆ ಸಂಬಂಧಿಸಿದಂತೆ 11ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
***
ರೀ ಈರುಳ್ಳಿ ದುಬಾರಿ!
ಈರುಳ್ಳಿ ಮತ್ತೆ ಗಗನಮುಖಿ! ಈ ವಾರದ ಮೊದಲ ದಿನದಿಂದಲೇ ಬೆಲೆ ಹೆಚ್ಚುತ್ತಲೇ ಇದೆ.
ಮೊದಲು ಕ್ವಿಂಟಾಲ್‌ಗೆ 600-700 ರೂಪಾಯಿ ಇದ್ದ ಈರುಳ್ಳಿ ದರ, ಏರಿಕೆಯ ಹಾದಿಯಲ್ಲಿದೆ. 1000-1500 ರೂಪಾಯಿವರೆಗೆ ಬೆಲೆ ಹೆಚ್ಚಿಸಿಕೊಂಡಿದೆ. ಮಹಾರಾಷ್ಟ್ರ ಮತ್ತು ಬಿಜಾಪುರದಿಂದ ಬರುತ್ತಿದ್ದ ಈರುಳ್ಳಿ ಪ್ರಮಾಣ ಶೇ.50ರಷ್ಟು ಕಡಿಮೆಯಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಈರುಳ್ಳಿ ದರ ಹೆಚ್ಚುತ್ತಿದೆ ಎಂದು ವರ್ತಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
***
ಸಂಜಯದತ್‌ಗೆ ಜೈಲು ಶಿಕ್ಷೆ ?
ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ನಟ ಸಂಜಯದತ್‌ಗೆ ಶಿಕ್ಷೆಯಾಗುವ ಸಾಧ್ಯತೆಗಳಿವೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ.
ವಿಶೇಷ ಟಾಡಾ ನ್ಯಾಯಾಲಯ, ಸಂಜಯದತ್‌ಗೆ ಬಂದೂಕು ಪೂರೈಸಿದ ಆರೋಪಿಗಳಿಗೆ ಈಗಾಗಲೇ ಶಿಕ್ಷೆ ನೀಡಿದೆ. ಮುಂದಿನ ಸರದಿ ಸಂಜಯದತ್ ಅವರದೇ ಎನ್ನಲಾಗಿದೆ. ಸಂಜಯ್‌ದತ್ ಕ್ಷಮಾದಾನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications