ಇನ್ಸಾಟ್ 4ಬಿ ಅರ್ಪಣೆ : ದೂರಸಂಪರ್ಕ ಕ್ಷೇತ್ರದಿ ಕ್ರಾಂತಿ?
ಹಾಸನ : ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ, ಶುಕ್ರವಾರ ‘ಇನ್ಸಾಟ್ 4ಬಿ’ ಉಪಗ್ರಹವನ್ನು ದೇಶಕ್ಕೆ ಸಮರ್ಪಿಸಿದರು.
ಹಾಸನದ ಮುಖ್ಯ ನಿಯಂತ್ರಣ ವ್ಯವಸ್ಥೆ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿಗಳೊಂದಿಗೆ ಅನೇಕ ವಿಜ್ಞಾನಿಗಳು ಪಾಲ್ಗೊಂಡಿದ್ದರು. ಭಾರತೀಯ ಬಾಹ್ಯಕಾಶ ಸಂಸ್ಥೆ(ಇಸ್ರೋ)ಯು ದೇಶೀಯ ತಂತ್ರಜ್ಞಾನ ಬಳಸಿಕೊಂಡು, ಈ ಉಪಗ್ರಹವನ್ನು ರೂಪಿಸಿದೆ. 350ಕ್ಕೂ ಅಧಿಕ ವಿಜ್ಞಾನಿಗಳು ಈ ಕಾರ್ಯಕ್ಕಾಗಿ ಶ್ರಮಿಸಿದ್ದಾರೆ.
ಮಾ.11ರಂದು ಉಡಾವಣೆಯಾದ ಈ ಉಪಗ್ರಹವನ್ನು ಮೂಲ ಕಕ್ಷೆಗೆ ಸೇರಿಸುವ ಪ್ರಯತ್ನ ಫಲಿಸಿದೆ. ದೂರವಾಣಿ, ಟೆಲಿ ಸಂಪರ್ಕಕ್ಕೆ ಈ ಉಪಗ್ರಹ ಪೂರಕವಾಗಲಿದೆ. ಭಾರತೀಯ ದೂರ ಸಂಪರ್ಕ ಕ್ಷೇತ್ರದಲ್ಲಿ ಇನ್ನಷ್ಟು ಕ್ರಾಂತಿಯನ್ನು ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications