ಗುರುವಾಯೂರು ದೇಗುಲಕ್ಕೆ ಹಿಂದೂಗಳಿಗಷ್ಟೇ ಪ್ರವೇಶ!

ತಿರುವನಂತಪುರ : ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ, ಹಿಂದೂಗಳಲ್ಲದವರು ಕಡ್ಡಾಯವಾಗಿ ಇನ್ನುಮುಂದೆ ಪ್ರವೇಶಿಸುವಂತಿಲ್ಲ.

ಕೇಂದ್ರ ಸಚಿವ ವಯಲಾರ್‌ ರವಿ ಅವರ ಪುತ್ರ ರವಿಕೃಷ್ಣ, ತಮ್ಮ ಕ್ರಿಶ್ಚಿಯನ್‌ ಪತ್ನಿ ಜೊತೆ ದೇವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಆ ನಂತರ ಶುದ್ಧೀಕರಣ ಮಾಡಲಾಗಿತ್ತು. ಈ ವಿವಾದದ ಹಿನ್ನೆಲೆ ತ್ರಿಶ್ಯೂರಿನಲ್ಲಿ ನಡೆದ ಅರ್ಚಕರ ಸಭೆ, ಹಿಂದೂಯೇತರರ ಪ್ರವೇಶ ತಡೆಯಲು ತೀರ್ಮಾನ ಕೈಗೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರವಿಕೃಷ್ಣ, ನಾನು ಮೂಲತಃ ಹಿಂದೂ ಸಮುದಾಯದ ಒಬಿಸಿ ಗುಂಪಿಗೆ ಸೇರಿದವ. ನನ್ನ ಜಾತಿಯನ್ನು ಮುಂದಿಟ್ಟುಕೊಂಡು, ಪ್ರವೇಶ ನಿರಾಕರಿಸಲಾಯಿತು ಎಂದು ದೂರಿದ್ದಾರೆ.

ಈ ಹಿಂದೆ ಗಾಯಕ ಜೇಸುದಾಸ್‌ಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಜೇಸುದಾಸ್‌ರ ಬಾಗಿಲಲ್ಲಿ ತಡೆದರೆ, ಶ್ರೀಕೃಷ್ಣ ಒಪ್ಪುವನೇ? ಎಂಬ ಪ್ರತಿಕ್ರಿಯೆ ಆಗ ವ್ಯಕ್ತವಾಗಿತ್ತು.

(ಏಜನ್ಸೀಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+