ಹುಲಿ,ಚಿರತೆ ಚರ್ಮಕ್ಕೆ ಲಕ್ಷಲಕ್ಷ ಹಣ : ಮೈಸೂರಲ್ಲಿ ಜಾಲ
ಮೈಸೂರು : ಕಾಡು ಪ್ರಾಣಿಗಳಿಗೆ ವಿಷ ಹಾಕಿ ಕೊಂದು, ಅವುಗಳ ಚರ್ಮವನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರುವ ಜಾಲ, ಪ್ರಬಲವಾಗುತ್ತಿದೆ.
ಇತ್ತೀಚೆಗಷ್ಟೇ ನಗರದಲ್ಲಿ ವ್ಯಕ್ತಿಯೋರ್ವನಿಂದ 2.5ಲಕ್ಷ ರೂಪಾಯಿ ಮೌಲ್ಯದ ಚಿರತೆಚರ್ಮ ವಶಪಡಿಸಿಕೊಳ್ಳಲಾಗಿತ್ತು. ಈ ಬೆನ್ನಲ್ಲಿಯೇ, ಅರಣ್ಯ ಜಾಗೃತದಳ 3.5ಲಕ್ಷ ರೂಪಾಯಿ ಮೌಲ್ಯದ ಹುಲಿಚರ್ಮ ವಶಪಡಿಸಿಕೊಂಡಿದ್ದು, ಈ ಸಂಬಂಧ ವ್ಯಕ್ತಿಯಾಬ್ಬನನ್ನು ಬಂಧಿಸಿದೆ.
ಕೊಳ್ಳೇಗಾಲದ ಮುತ್ತಯ್ಯ ಬಂಧಿತ ವ್ಯಕ್ತಿ. ಗೋಣಿಚೀಲದಲ್ಲಿ ಹುಲಿಚರ್ಮ ತಂದಿದ್ದ ಈತ ಗಿರಾಕಿಗಾಗಿ ಕಾಯುತ್ತಿದ್ದ. ಇದರ ಖಚಿತ ಸುಳಿವು ಹಿಡಿದ ಅರಣ್ಯಾಧಿಕಾರಿಗಳು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಲಿಚರ್ಮವನ್ನು ನನಗೆ ತಮಿಳುನಾಡಿನ ವ್ಯಕ್ತಿಗಳು ಕೊಟ್ಟಿದ್ದು, ಇದನ್ನು ಮಾರಿದರೆ ಅರ್ಧ ಲಾಭ ನಿನಗೆ ಕೊಡುತ್ತೇವೆ ಎಂದು ಹೇಳಿದ್ದರು ಎಂದು ಮುತ್ತಯ್ಯ ವಿಚಾರಣೆ ವೇಳೆಯಲ್ಲಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications