ಜಲಸಾಕ್ಷರರ ಸೃಷ್ಟಿಗೆ ಏ.22ರಂದು ವ್ಯಂಗ್ಯಚಿತ್ರ ಪ್ರದರ್ಶನ
ಬೆಂಗಳೂರು : ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಬಿ.ವಿ.ಪಾಂಡುರಂಗ ರಾವ್ ಅವರ ವ್ಯಂಗ್ಯಚಿತ್ರ ಪ್ರದರ್ಶನ, ಏ.22ರಂದು ನಗರದಲ್ಲಿ ನಡೆಯಲಿದೆ. ನಗ್ತಾನಗ್ತಾ , ಚಿಂತನೆ ಮಾಡುತ್ತಾ, ಪರಿಸರ ಪ್ರೇಮ ಬೆಳೆಸಿಕೊಳ್ಳಲು ಇದು ಸುಸಂದರ್ಭ.
ನೀರನ್ನು ಗುರಿಯಾಗಿಟ್ಟುಕೊಂಡು ರೂಪುಗೊಂಡಿರುವ ವ್ಯಂಗ್ಯಚಿತ್ರಪ್ರದರ್ಶನ, ಕಬ್ಬನ್ ಪಾರ್ಕ್‌ನ ಬಾಲಭವನದಲ್ಲಿ ನಡೆಯಲಿದೆ. ನಗೆಲೇಪನದೊಂದಿಗೆ ಜಲ ಸಂರಕ್ಷಣೆ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ 50 ವ್ಯಂಗ್ಯಚಿತ್ರಗಳನ್ನು ಪ್ರದರ್ಶನದಲ್ಲಿ , ಸಾರ್ವಜನಿಕರು ವೀಕ್ಷಿಸಬಹುದು.
ಪ್ರಸಕ್ತ ವರ್ಷವನ್ನು ವಿಶ್ವಸಂಸ್ಥೆ ‘ವಿಶ್ವ ಜಲ ವರ್ಷ ’ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜನರನ್ನು ಜಲಸಾಕ್ಷರರನ್ನಾಗಿಸಲು ವ್ಯಂಗ್ಯಚಿತ್ರ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಎಕೋವಾಜ್ ಹಮ್ಮಿಕೊಂಡಿದೆ.
ಬಿ.ವಿ.ಪಾಂಡುರಂಗ ರಾವ್ ಅವರ ವ್ಯಂಗ್ಯಚಿತ್ರಗಳನ್ನು ಕಾಣಲು ಇಲ್ಲಿ ಕ್ಲಿಕ್ಕಿಸಿ...
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications