ಸಬ್ ಇನ್ಸ್‌ಪೆಕ್ಟರ್ ನಾಪತ್ತೆ! ನಿಮಗೆ ಸಿಕ್ಕಿದರೆ ತಪ್ಪದೇ ಹೇಳಿ..
ಮೈಸೂರು : ಸಬ್ ಇನ್ಸ್‌ಪೆಕ್ಟರ್ ನಾಪತ್ತೆಯಾಗಿದ್ದಾರೆ! ತಮಗೆ ಮುಂಬಡ್ತಿ ನೀಡಲು ಹಿರಿಯ ಅಧಿಕಾರಿಗಳು ಕಿರಿಕಿರಿ ಮಾಡುತ್ತಿದ್ದಾರೆಂದು ಅವರು ಠಾಣೆ ಬಿಟ್ಟು ಹೊರಹೋಗಿದ್ದಾರೆ. ಈವರೆಗೆ ಮರಳಿ ಬಂದಿಲ್ಲ.
ಹೀಗೆ ನಾಪತ್ತೆಯಾಗಿರುವ ಸಬ್ ಇನ್ಸ್‌ಪೆಕ್ಟರ್ ಹೆಸರು; ಮಂಜುನಾಥ್. ಎಚ್.ಡಿ.ಕೋಟೆ ತಾಲೂಕಿನ ಸರಗೂರಿನ ಈ ಸಬ್‌ಇನ್ಸ್‌ಪೆಕ್ಟರ್ ಎಲ್ಲಿದ್ದಾರೆ ಎಂಬುದು ಪತ್ತೆಯಾಗಿಲ್ಲ. ನನ್ನ ಪತಿದೇವರನ್ನು ಹುಡುಕಿಕೊಡಿ ಎಂದು ಅವರ ಪತ್ನಿ ಹೇಮಲತಾ ದೂರು ನೀಡಿದ್ದಾರೆ.
ಮೊದಲಿನಿಂದಲೂ ಮೇಲಾಧಿಕಾರಿಗಳ ಬಗ್ಗೆ ನನ್ನ ಪತಿ ಅಸಮಾಧಾನಗೊಂಡಿದ್ದರು. ನನಗೆ ಬರಬೇಕಾದ ಬಡ್ತಿ ಮತ್ತು ಪ್ರಶಸ್ತಿಯನ್ನು ಮೇಲಾಧಿಕಾರಿಗಳು ತಪ್ಪಿಸಿದರು. ಇಷ್ಟಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಪತಿದೇವರು ಆಗಾಗ ಹೇಳುತ್ತಿದ್ದರು ಎಂದು ಹೇಮಲತಾ ಅಭಿಪ್ರಾಯಪಟ್ಟಿದ್ದಾರೆ.
ಅದೇನೇ ಇರಲಿ, ಮಂಜುನಾಥ್ ಮನೆಗೆ ಮೊದಲು ಬರಲಿ.. ಅವರ ಕುಟುಂಬ ಅವರ ಕಾಣದೇ ಕಂಗೆಟ್ಟಿದೆ.. ಕಾರ್ಮೋಡ ಬೇಗ ಕರಗಲಿ..
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications