ಪೇಜಾವರ ಶ್ರೀಗಳ ಮೇಲಿನ ಕಳಂಕ ಇನ್ನಿಲ್ಲ : ಹೈಕೋರ್ಟ್
ಬೆಂಗಳೂರು : ಕ್ರಿಮಿನಲ್ ಪ್ರಕರಣವೊಂದರಿಂದ ಹೊರಬಂದಿರುವ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳಂಕ ಮುಕ್ತರಾಗಿದ್ದಾರೆ.
ಎಂ.ಇ.ಎಸ್.ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಕೆ.ಎಸ್.ವೆಂಕಟೇಶ್, ಶ್ರೀಗಳು ಮತ್ತು ಉಪಮುಖ್ಯಮಂತ್ರಿ ವಿರುದ್ಧ ಆರೋಪ ಮಾಡಿದ್ದರು. ನನ್ನಿಂದ ಸಾಲ ವಸೂಲಿಗೆ ಪ್ರಾಣ ಬೆದರಿಕೆಯಾಡ್ಡಿದ್ದಾರೆ ಎಂದು ದೂರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಆರೋಪಗಳಿಗೆ ಪೂರಕ ಸಾಕ್ಷಿಗಳಿಲ್ಲ. ಹೀಗಾಗಿ ನಂಬುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಆದರೆ ಇದೇ ವೇಳೆ ಪೊಲೀಸರು ಕೆ.ಎಸ್.ವೆಂಕಟೇಶ್ ಮತ್ತು ಅವರ ಸಹೋದರಿಗೆ ಪೊಲೀಸರು ಕಿರುಕುಳ ನೀಡಿರುವುದು ಸಾಬೀತಾಗಿದೆ. ಅಕ್ರಮವಾಗಿ ಪೊಲೀಸ್ ಠಾಣೆಯಲ್ಲಿಟ್ಟಿರುವುದು ತಪ್ಪು. ಇವರಿಬ್ಬರಿಗೆ ತಲಾ 50ಸಾವಿರ ಪರಿಹಾರ ಧನ ನೀಡುವಂತೆ ಸರ್ಕಾರಕ್ಕೆ ಕೋರ್ಟ್ ಆದೇಶಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications