ವಿ.ಪರಿಷತ್‌ನಲ್ಲಿ 5 ಸ್ಥಾನ ಖಾಲಿ.. ಯಾರು ಬರ್ತಾರೋ?
ಬೆಂಗಳೂರು : ಮುಂಬರುವ ಜುಲೈನಲ್ಲಿ ತೆರವಾಗಲಿರುವ ವಿಧಾನಪರಿಷತ್‌ನ ಐದು ಸ್ಥಾನಗಳಿಗೆ ಯಾರನ್ನು ನಾಮಕರಣ ಮಾಡಬೇಕೆಂಬ ನಿರ್ಧಾರವನ್ನು, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಯಡಿಯೂರಪ್ಪ ತೆಗೆದುಕೊಳ್ಳಲಿದ್ದಾರೆ.
ಸಂಪುಟ ಸಭೆ ಈ ಕುರಿತು ನಿರ್ಧಾರ ತೆಗೆದುಕೊಂಡಿದೆ. ಪ್ರಭಾಕರ ಕೋರೆ, ಡಾ.ಎಲ್.ಹನುಮಂತಯ್ಯ, ಬಿ.ಎ.ಹಸನಬ್ಬ, ಉಮಾಶ್ರೀ ಹಾಗೂ ಎಂ.ಡಿ.ರಮೇಶ್‌ರಾಜು ಜುಲೈ 16ರಂದು ನಿವೃತ್ತರಾಗಲಿದ್ದಾರೆ.
ಸೀಟು ಹಂಚಿಕೆ ಕುರಿತು ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಯಾವುದೇ ಅಪಸ್ವರವಿಲ್ಲ. ಹಾಗಾಗಿ ನಾಮಕರಣ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಈಗಾಗಲೇ ಆಕಾಂಕ್ಷಿಗಳು ತಮ್ಮ ಪ್ರಯತ್ನ ಆರಂಭಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications