ಅಕ್ಷಯ ತೃತೀಯ : ಬಂಗಾರದೊಡವೆ ಬೇಕೇ? ನೀರೇ...

Beautiful hands wearing golden banglesಬೆಂಗಳೂರು : ಅಕ್ಷಯ ತೃತೀಯದ ಸಂದರ್ಭದಲ್ಲಿ ಬಂಗಾರ ಖರೀದಿಸಿದರೇ, ವರ್ಷವಿಡೀ ಬದುಕು ಅಕ್ಷಯವಾಗುತ್ತದೆ ಎಂಬುದೊಂದು ನಂಬಿಕೆ. ಈ ನಂಬಿಕೆ ಬಳಸಿಕೊಂಡು, ವ್ಯಾಪಾರಿಗಳು ಜೇಬುತುಂಬಿಸಿಕೊಳ್ಳುತ್ತಿದ್ದಾರೆ.

ಈ ವರ್ಷ ಏ.19ರ ಮಧ್ಯಾಹ್ನ 2.22ಕ್ಕೆ ಅಕ್ಷಯ ತೃತೀಯ ಆರಂಭವಾಗಿದ್ದು, ಏ. 20ರ ರಾತ್ರಿ 8ಗಂಟೆ ತನಕ ಮುಂದುವರೆಯಲಿದೆ. ಹೀಗಾಗಿ ನಗರದ ವಿವಿಧ ಚಿನ್ನದ ಮಳಿಗೆಗಳು ತುಂಬಿ ತುಳುಕುತ್ತಿವೆ. ಗ್ರಾಹಕರು ಮುಗಿಬಿದ್ದು ಚಿನ್ನ ಖರೀದಿಸುತ್ತಿದ್ದಾರೆ.

ಇಂದು(ಏ.20) ಬಸವಜಯಂತಿ ಪ್ರಯುಕ್ತ ಸಾರ್ವಜನಿಕ ರಜೆ ಇದೆ. ಈ ಪರಿಣಾಮ ಆಭರಣ ಖರೀದಿಯ ಭರಾಟೆ ಇನ್ನಷ್ಟು ಹೆಚ್ಚಿದೆ.

ಅಕ್ಷಯ ತೃತೀಯ ದೂರವಿದ್ದಾಗಲೇ, ಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಮಾಡಿ ನಗರದ ವಿವಿಧ ಆಭರಣ ಮಳಿಗೆಗಳು ಗ್ರಾಹಕರ ಸೆಳೆದಿವೆ. ಆಕರ್ಷಕ ಕೊಡುಗೆ ಮತ್ತು ರಿಯಾಯಿತಿಗಳನ್ನು ಅವು ಗ್ರಾಹಕರಿಗೆ ನೀಡುತ್ತಿವೆ. ಈ ವರ್ಷ ದೇಶದಲ್ಲಿ 35ರಿಂದ 40ಟನ್‌ ಚಿನ್ನ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+