ಹಿರಿಯ ನಟ ಎಂ.ಪಿ ಶಂಕರ್‌ ಚಿಕಿತ್ಸೆ ಗೆ ಸರ್ಕಾರದ ನೆರವು

ಬೆಂಗಳೂರು: ಗುರುವಾರ(ಏಪ್ರಿಲ್‌ .06)ದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಟ ಎಂ.ಪಿ. ಶಂಕರ್‌ ಅವರ ಚಿಕಿತ್ಸೆಗೆ ಧನ ಸಹಾಯ, ಬ್ಯಾಂಕ್‌ ಸಿಬ್ಬಂದಿಗೆ ಹೆಚ್ಚುವರಿ ರಜೆ ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ ಹಿರಿಯ ನಟ ಹಾಗೂ ನಿರ್ಮಾಪಕ ಎಂ.ಪಿ. ಶಂಕರ್‌ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ರೂ. ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಚ್‌. ಎಸ್‌. ಮಹಾದೇವ ಪ್ರಸಾದ್‌ ತಿಳಿಸಿದರು.

ಉಳಿದ ನಿರ್ಣಯಗಳು ಇಂತಿದೆ:

  • ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿಗಳಿಗೆ ವರ್ಷದಲ್ಲಿ ನಾಲ್ಕು ಹೆಚ್ಚುವರಿ ರಜೆ ಲಭಿಸಲಿದೆ. ಇದರಂತೆ ಏಪ್ರಿಲ್‌ 14 ರಂದು ಅಂಬೇಡ್ಕರ್‌ ಜಯಂತಿ, ಅಕ್ಟೋಬರ್‌ 13 ರಂದು ರಂಜಾನ್‌, ಅಕ್ಟೋಬರ್‌ 30 ರಮ್ದು ಮಾಹಾನವಮಿ ಹಾಗೂ ನವೆಂಬರ್‌ 10 ರಂದು ಬಲಿಪಾಡ್ಯಮಿ ದಿನದಂದು ಬ್ಯಾಂಕ್‌ ನೌಕರರು ರಜೆ ಪಡೆಯಲಿದ್ದಾರೆ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಆಡಳಿತ ಮಂಡಳಿಗಳು ನಡೆಸುತ್ತಿರುವ ಒಟ್ಟು 63 ಪದವಿ ಪೂರ್ವ ಕಾಲೇಜುಗಳಿಗೆ ಅನುದಾನ ನೀಡಲಾಗುವುದು. ಇದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 6.89 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದರು.
(ದಟ್ಸ್‌ ಕನ್ನಡ ವಾರ್ತೆ)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+