ಅಪಘಾತ : ವಿಜ್ಞಾನಿ ಕುಟುಂಬಕ್ಕೆ ಬೃಹತ್ ಪರಿಹಾರ ಧನ
ಬೆಂಗಳೂರು : ಎರಡು ವರ್ಷಗಳ ನಂತರ, ರಸ್ತೆ ಅಪಘಾತದಲ್ಲಿ ನಿಧನರಾಗಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಬಿ.ಟಿ.ರಾಜಶೇಖರ್ ಅವರ ಕುಟುಂಬಕ್ಕೆ ಪರಿಹಾರ ಧನ ಸಿಕ್ಕಿದೆ.
ರಾಜಶೇಖರ್ ಅವರ ಕುಟುಂಬಕ್ಕೆ 32.78ಲಕ್ಷ ರೂ. ಪರಿಹಾರ ನೀಡುವಂತೆ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಆದೇಶಿಸಿದೆ. ಸೂಕ್ತ ಪರಿಹಾರ ಕೋರಿ ಅವರ ಪತ್ನಿ ಅರ್ಜಿ ಸಲ್ಲಿಸಿದ್ದರು.
ನಿಧನರಾದಾಗ ರಾಜಶೇಖರ್‌ಗೆ 51ವರ್ಷ ವಯಸ್ಸಾಗಿತ್ತು. ಅವರಿಗೆ ಇನ್ನೂ 11ವರ್ಷ ಸೇವಾವಧಿ ಇತ್ತು. ಮಾಸಿಕ 40,800ರೂಪಾಯಿ ಸಂಬಳ ಪಡೆಯುತ್ತಿದ್ದ ಅಂಶವನ್ನು ಪರಿಗಣಿಸಿದ ನ್ಯಾಯಮಂಡಳಿ, ಬೃಹತ್ ಮೊತ್ತದ ಪರಿಹಾರ ನೀಡಲು ಸಮ್ಮತಿಸಿದರು. ಇತ್ತೀಚಿನ ದಿನಗಳಲ್ಲಿ ನೀಡಲಾದ ಪರಿಹಾರ ಮೊತ್ತಗಳಲ್ಲಿ ಇದೇ ದೊಡ್ಡದು.
ರಾಷ್ಟ್ರೀಯ ವಿಜ್ಞಾನ ಮಾಹಿತಿ ಕೇಂದ್ರದ ಸಹ ಅಧ್ಯಕ್ಷರಾಗಿಯೂ ಡಾ.ರಾಜಶೇಖರ್ ಕಾರ್ಯನಿರ್ವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications