ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರ ಕಿಡ್ನಿ ಸಮಸ್ಯೆಗಳಿಗೆ ಮಣಿಪಾಲ್‌ ಆಸ್ಪತ್ರೆ ಸ್ಪಂದನ

By Staff
|
Google Oneindia Kannada News

ಬೆಂಗಳೂರು : ಮಣಿಪಾಲ್‌ ಆಸ್ಪತ್ರೆಯಲ್ಲಿ ‘ವಿಶ್ವ ಮೂತ್ರಪಿಂಡ ದಿನಾಚರಣೆ’ ಹಿನ್ನೆಲೆಯಲ್ಲಿ , ಉಚಿತ ಡಯಾಲಿಸಿಸ್‌ ಸೇವೆಗೆ ಚಾಲನೆ ನೀಡಲಾಯಿತು.

ಶ್ರೀಮತಿ ಪ್ರೇಮಾದೇವಿ ಮಳಿಮಠ್‌ ಸ್ಮರಣಾರ್ಥ ಉಚಿತ ಡಯಾಲಿಸಿಸ್‌ ಸೇವೆಯನ್ನು ಆರಂಭಿಸಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ರೋಗಿಗಳು, ಸೇವೆಯ ಪ್ರಯೋಜನ ಪಡೆಯಬಹುದು. ಈ ಯೋಜನೆಯನ್ನು, ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗಡೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಣಿಪಾಲ್‌ ಹೆಲ್ತ್‌ ಸಿಸ್ಟಮ್‌ ಸಿಇಓ ಮಾತನಾಡಿ, ಪ್ರಾಯೋಜಕತ್ವದಲ್ಲಿ ಡಯಾಲಿಸಿಸ್‌ ಸೇವೆಯನ್ನು ನೀಡುವ ಮತ್ತೊಂದು ಹೊಸ ಯೋಜನೆಯನ್ನು ಸದ್ಯದಲ್ಲಿಯೇ ಅನುಷ್ಠಾನಗೊಳಿಸುತ್ತೇವೆ. ಕಾರ್ಪೋರೇಟ್‌ ಸಂಸ್ಥೆಗಳು ಪ್ರಾಯೋಜಕತ್ವಕ್ಕೆ ಮುಂದೆ ಬರಬೇಕು ಎಂದು ಕೋರಿದರು.

ಕಿಡ್ನಿ ಸಮಸ್ಯೆ ಹೆಚ್ಚಳ : 2050ರ ವೇಳೆಗೆ ಕಿಡ್ನಿ ಸಮಸ್ಯೆಗಳಿಂದ 36ಮಿಲಿಯನ್‌ ಜನ ಸಾಯುವ ಸಾಧ್ಯತೆಗಳಿವೆ. ಪ್ರತಿದಿನ 600ಜನರು ಕಿಡ್ನಿ ಸಮಸ್ಯೆಯಿಂದ ಭಾರತದಲ್ಲಿ ಸಾಯುತ್ತಿದ್ದಾರೆ. ಗಂಟೆಗೆ 25ಜನ ಸಾಯುತ್ತಿದ್ದಾರೆ ಎಂದು ಸಮೀಕ್ಷಾ ವರದಿಯಾಂದು ಹೇಳಿರುವ ಅಂಶ ಇಲ್ಲಿ ಉಲ್ಲೇಖನೀಯ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X