ಕಾವೇರಿ ಕಾವು : ತಮಿಳರ ಕಣ್ಣೀಗ ರಜನಿಕಾಂತ್ ಮೇಲೆ!
ಚೆನ್ನೈ: ಕಾವೇರಿ ನ್ಯಾಯಮಂಡಳಿ ತೀರ್ಪನ್ನು ವಿರೋಧಿಸಿ ಕನ್ನಡ ಚಿತ್ರರಂಗ ಒಂದು ದಿನ ಚಿತ್ರೀಕರಣ ನಿಲ್ಲಿಸಿ, ಮೆರವಣಿಗೆ ಮಾಡಿದ್ದು, ಹಾಗೂ ಅದಕ್ಕೆ ಕರ್ನಾಟಕ ಸರ್ಕಾರದ ಬೆಂಬಲ ಕೂಡ ದೊರೆತಿದ್ದು, ತಮಿಳು ಜನರನ್ನು ಕೆರಳಿಸಿದೆ.
ಕರ್ನಾಟಕದಲ್ಲಿ ಅಷ್ಟೆಲ್ಲಾ ಗಲಾಟೆ ನಡೆಯುತ್ತಿದ್ದರೂ, ತಮಿಳು ಚಿತ್ರರಂಗ ಸುಮ್ಮನೆ ಕೂತಿರುವುದು ತಮಿಳುನಾಡಿನ ಸಿನಿ ರಸಿಕರಿಗೆ ನಿರಾಶೆ ಮೂಡಿಸಿದೆ. ತಮಿಳು ನಾಡಿನ ಪರ ಸೂಪರ್‌ಸ್ಟಾರ್ ರಜನಿಕಾಂತ್ ಹೋರಾಟದ ನೇತೃತ್ವ ವಹಿಸಬೇಕೆಂಬ ಕೂಗು ಎಲ್ಲೆಡೆ ಕೇಳಿಸುತ್ತಿದೆ.
ಇದನ್ನು ಕೇಳಿಸಿಕೊಂಡೊ ಏನೋ ಕಂಬನ್ ಎಂಬ ತಂಜಾವೂರಿನ ವಕೀಲ ಹಾಗೂ ರಜನಿ ಬೆಂಬಲಿಗರು, ನೆಚ್ಚಿನ ನಟ ರಜನಿಕಾಂತ್ ಅವರ ಪಾಯಿಸ್ ಗಾರ್ಡನ್ ಮನೆ ಮುಂದೆ ಕೂತು, ಆಮರಣಾಂತ ಉಪವಾಸ ಕೈಗೊಂಡಿದ್ದಾರೆ.
ರಜನಿಕಾಂತ್ ಮುಂದಾಳಾಗಿ ಕಾವೇರಿ ನೀರಿಗಾಗಿ, ತಮಿಳುನಾಡಿನ ಪರ ಹೋರಾಡಬೇಕು ಎಂಬುದು ಅವರೆಲ್ಲರ ಒಕ್ಕೊರಲಿನ ಕೂಗು. ಮೆರವಣಿಗೆಯಲ್ಲಿ ಸಾಗುತ್ತಿದ್ದ ಕಂಬನ್ ಹಾಗೂ ಇತರೆ 20ಮಂದಿಯನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದ್ದಾರೆ.
(ಏಜನ್ಸೀಸ್)












Click it and Unblock the Notifications