ಎಸ್‌ಡಿಸಿ ಉದ್ಯೋಗ ಗಿಟ್ಟಿಸಿದ 983 ಅಭ್ಯರ್ಥಿಗಳ ವಿವರ
ಬೆಂಗಳೂರು : 983 ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಸಿ)ರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅಂತಿಮ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಪ್ರಕಟಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆಯೋಗದ ಅಧ್ಯಕ್ಷರು, ಆಯ್ಕೆ ಪಟ್ಟಿಯನ್ನು ಆಯೋಗದ ವೆಬ್‌ಸೈಟ್( http://kpsc.kar.nic.in/)ನಲ್ಲಿ ಪ್ರಕಟಿಸಲಾಗಿದೆ. ಆಯ್ಕೆಗೊಂಡವರು ಹೆಸರು, ಗಳಿಸಿದ ಅಂಕ, ಆಯ್ಕೆಯಾದ ವಿಭಾಗವನ್ನು ಅಲ್ಲಿ ಸೂಚಿಸಲಾಗಿದೆ. ಆಸಕ್ತರು ಗಮನಿಸಬಹುದು ಎಂದಿದ್ದಾರೆ.
ಎಸ್‌ಡಿಸಿ ಪರೀಕ್ಷೆಯನ್ನು ಲಕ್ಷಾಂತರ ಅಭ್ಯರ್ಥಿಗಳು ತೆಗೆದುಕೊಂಡಿದ್ದರು. ಅಂತಿಮವಾಗಿ 983ಅಭ್ಯರ್ಥಿಗಳಿಗೆ ಸರ್ಕಾರ ವಿವಿಧ ಇಲಾಖೆಗಳಲ್ಲಿ ನೇಮಕಾತಿ ನಡೆದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications