ಒಂದೂವರೆ ತಾಸು ಈಜಿದ ಒಂದೂವರೆ ವರ್ಷದ ಮಗು!

ರೋಣ : ಕೇವಲ 22 ತಿಂಗಳ ಪ್ರಾಯದ ಪುಟಾಣಿ ಬಾಲಕ, ಗದಗ ಜಿಲ್ಲೆ ರೋಣ ತಾಲ್ಲೂಕಿನ ಅಬ್ಬಿಗೆರೆ ಗ್ರಾಮದಲ್ಲಿ , 90 ನಿಮಿಷಗಳ ಕಾಲ ನೀರಿನಲ್ಲಿ ಈಜಿ ಎಲ್ಲರನ್ನೂ ವಿಸ್ಮಯಗೊಳಿಸಿದ್ದಾನೆ.

ಗದ್ದೆ ಬದಿಯಲ್ಲಿ ಕೃಷಿಗಾಗಿ ನೀರು ಶೇಖರಿಸುವ ಹೊಂಡದಲ್ಲಿ ಸಂಗಪ್ಪ ಪಸರದ ಮತ್ತು ಪುಷ್ಪಾ ಎಂಬುವರ ಮಗು ವೀರಣ್ಣ , ಈ ಸಾಹಸ ಮೆರೆದಿದ್ದಾನೆ.

ಒಂದು ವರ್ಷ ವಯಸ್ಸಿದ್ದಾಗ ವೀರಣ್ಣ , ತುಂಗಭದ್ರಾ ನದಿಯಲ್ಲಿ ಧೈರ್ಯದಿಂದ ಸ್ನಾನಮಾಡಿದ್ದನ್ನು ಕಂಡು, ಮನೆಯಲ್ಲಿ ಬಕೇಟ್‌ ನೀರಿನಲ್ಲಿ ಈಜಲು ಅನುವು ಮಾಡಿಕೊಟ್ಟೆವು ಎನ್ನುತ್ತಾರೆ ಬಾಲಕನ ತಂದೆ ಸಂಗಪ್ಪ.

ನಂತರ 6 ಅಡಿ ಆಳದ ನೀರಿನ ತೊಟ್ಟಿಯಲ್ಲಿ ಈಜಿದ ಈ ಪೋರ, ಈಗ 40 ಅಡಿ ಆಳದ ಹೊಂಡದಲ್ಲಿ ಸುಲಭವಾಗಿ ಈಜಿದ್ದಾನೆ. ಸುತ್ತಲೂ ನೆರೆದಿದ್ದ ಗ್ರಾಮಸ್ಥರ ಕೂಗಾಟಕ್ಕೆ ಹೆದರದೇ ಈಜಿದ ವೀರಣ್ಣ, ಭವಿಷ್ಯದ ಈಜುಪಟು ಅಗಬಲ್ಲನೇ?

(ಏಜನ್ಸೀಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+