• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುಬೈ-ಭಾರತೀಯರ ಆತ್ಮಹತ್ಯೆಗಳು ಗಣನೀಯ ಹೆಚ್ಚಳ!

By Staff
|

ದುಬೈ : ದುಬೈನಲ್ಲಿರುವ ಭಾರತೀಯ ಸಮುದಾಯದಲ್ಲಿ ಆತ್ಮಹತ್ಯೆ ಪ್ರಮಾಣ ಇತ್ತೀಚೆಗೆ ಅಧಿಕಗೊಂಡಿದೆ.

Suicide rate among Indians community in Dubai up by 10%ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇಲ್ಲಿ ಆತ್ಯಹತ್ಯೆ ಪ್ರಕರಣಗಳು ಶೇ.10ರಷ್ಟು ಹೆಚ್ಚಿವೆ. ಭಾರತೀಯ ಸಮುದಾಯದಲ್ಲಿ 1157ಸಾವಿನ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ನೂರು ಮಂದಿ ಆತ್ಮಹತ್ಯೆಗೆ ಶರಣಾದವರು ಎಂಬ ಅಂಶವನ್ನು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

ಬಹುತೇಕ ಆತ್ಮಹತ್ಯೆಗಳು ನಾಟಕೀಯ ರೀತಿಯಲ್ಲಿ ಸಂಭವಿಸಿವೆ. ಆತ್ಮಹತ್ಯೆಗಳ ಖಚಿತ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ರಾಯಭಾರ ಕಚೇರಿ ಹೇಳಿದೆ.

ವಲಸಿಗರ ಗಮನಕ್ಕೆ -

ಹೊಟ್ಟೆಪಾಡಿಗೋ, ಹಣ ಗಳಿಸುವ ಬಯಕೆಗಾಗಿಯೋ ಕನಸುಗಳನ್ನು ಕಟ್ಟಿಕೊಂಡು ಭಾರತದಿಂದ ದುಬೈ ಅಥವಾ ಇತರೆ ದೇಶಕ್ಕೆ ಹಾರುವ ಮಂದಿ, ವಾಪಸ್‌ ತವರಿಗೆ ಬರದಿದ್ದರೆ ಹೆತ್ತ ಜೀವಗಳ ನೋವಿಗೆ ಮುಲಾಮು ಹಚ್ಚುವವರ್ಯಾರು.

ಎಲ್ಲವೂ ಸರಿಯಿಲ್ಲ ಅನ್ನಿಸಿದರೆ, ತವರಿಗೆ ಮರಳುವುದು ಒಳ್ಳೆಯದು. ಅದು ಸಾಧ್ಯವಾಗದಿದ್ದರೇ, ಪರ್ಯಾಯ ಮಾರ್ಗಗಳನ್ನು ಆಲೋಚಿಸುವುದು ಜಾಣರ ಲಕ್ಷಣ. ಆತ್ಮಹತ್ಯೆ ಎಂದಿಗೂ ಪರ್ಯಾಯ ಮಾರ್ಗವಾಗಲಾರದು. ಅದು ಸೋತವರ ಮಾರ್ಗ. ಸಮರ ಎದುರಿಸದೇ ಸೋತವರ ಮಾರ್ಗ!

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X