ಕೊಲೆಪಾತಕ ಬೀದಿನಾಯಿಗಳ ದಾಳಿಗೆ ಬಾಲಕ ಬಲಿ!!!!

ಬೆಂಗಳೂರು : 4ವರ್ಷದ ಬಾಲಕನೊಬ್ಬನನ್ನು ಬೀದಿ ನಾಯಿಗಳು ಕಚ್ಚಿ ಸಾಯಿಸಿರುವ ಆಘಾತಕಾರಿ ಘಟನೆ, ನಗರದ ಬಿಇಎಂಎಲ್‌ ಲೇಔಟ್‌ನಲ್ಲಿ ನಡೆದಿದೆ.

ಮೃತ ಬಾಲಕನನ್ನು ಮಂಜುನಾಥ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ(ಫೆಬ್ರವರಿ 28) ಬಿಇಎಂಎಲ್‌ ಲೇಔಟ್‌ನಲ್ಲಿ ಬಾಲಕ ತನ್ನ ಗೆಳೆಯರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಪ್ರತ್ಯಕ್ಷ ಸಾಕ್ಷಿಗಳನ್ವಯ, ಸುಮಾರು 15 ಬೀದಿ ನಾಯಿಗಳು ಬಾಲಕನ ಮೇಲೆರಗಿ, ಗಂಟಲೂ ಸೇರಿದಂತೆ ಮೈಯೆಲ್ಲಾ ಕಚ್ಚಿಹಾಕಿವೆ. ವಿಪರೀತ ರಕ್ತಸ್ರಾವವಾದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಘಟನೆಯ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪ್ರದೇಶದ ಜನತೆ, ಬೀದಿನಾಯಿಗಳ ಹಾವಳಿ ತಪ್ಪಿಸುವಲ್ಲಿ ನಿಷ್ಕಿೃಯವಾಗಿರುವ ಮಹಾನಗರಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್‌.ಅಶೋಕ್‌ ಮೃತ ಬಾಲಕನ ಪಾಲಕರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಧನ ಪ್ರಕಟಿಸಿದರು.

ಇತ್ತೀಚೆಗಷ್ಟೆ ಚಂದ್ರಾಲೇಔಟ್‌ನಲ್ಲಿ ಇದೇ ರೀತಿಯ ದುರ್ಘಟನೆ ನಡೆದು, ಆರು ವರ್ಷದ ಬಾಲಕಿಯಾಬ್ಬಳು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಪಾಲಿಕೆ ಅಧಿಕಾರಿಗಳ ಸಭೆ : ಬೀದಿ ನಾಯಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ, ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಗುರುವಾರ ಮಹಾನಗರಪಾಲಿಕೆ ಅಧಿಕಾರಿಗಳ ಸಭೆ ನಡೆಯಿತು.

(ಯುಎನ್‌ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+