ಮಂಗಳೂರು ಪೊಲೀಸರ ವಶದಲ್ಲಿ ದಾವೂದ್ ಬಂಟ!
ಮಂಗಳೂರು : ಮುಂಬಯಿ ಭೂಗತದೊರೆ ದಾವೂದ್ ಇಬ್ರಾಹಿಂ ಬಂಟ ಅಬ್ದುಲ್ ರೆಹಮಾನ್ ಅಲಿಯಾಸ್ ಅಬ್ದುಲ್ ರಷೀದ್ ಅಲಿಯಾಸ್ ಹಸೈನಾರ್ ಅಲಿಯಾಸ್ ಪುಟ್ಟುನನ್ನು ಮಾ.5ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ನಕಲಿ ನೋಟುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನಲ್ಲಿ ಬಂಧಿತನಾದ ಅಬ್ದುಲ್ ರಷೀದ್‌ನನ್ನು ಮುಂಬಯಿ ಪೋಲೀಸರು, ಮಂಗಳೂರು ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಹೆಚ್ಚಿನ ತನಿಖೆಗೆಗಾಗಿ ನ್ಯಾಯಾಲಯ, ರಷೀದ್‌ನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಅಬ್ದುಲ್ ರೆಹಮಾನ್ ಪುತ್ತೂರಿನವನು. ಮೂಲಗಳ ಪ್ರಕಾರ, ದಾವೂದ್ ಇಬ್ರಾಹಿಂ ಬಂಟನಾದ ಈತ, ಹಲವು ಪ್ರಕರಣಗಳಲ್ಲಿ ದೆಹಲಿ ಹಾಗೂ ಮುಂಬಯಿ ಪೊಲೀಸರಿಗೆ ಬೇಕಾದ ವ್ಯಕ್ತಿ. 2005ರಲ್ಲಿ ಮಂಗಳೂರಿನಲ್ಲಿ ನಡೆದ 5.5ಲಕ್ಷ ರೂಪಾಯಿ ನಕಲಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ ಮತ್ತು ಮುಂಬಯಿ ಪೊಲೀಸರು ಈತನನ್ನು ವಿಚಾರಣಗೆ ಗುರಿಪಡಿಸಿದ್ದಾರೆ.
ಪ್ರಕರಣದ ಏಳು ಜನ ಆರೋಪಿಗಳ ಪೈಕಿ ಈತನನ್ನು ಹೊರತುಪಡಿಸಿ, ಇತರ ಆರು ಜನರನ್ನು ಪ್ರಕರಣ ನಡೆದ ಕೂಡಲೆ ಬಂಧಿಸಲಾಗಿತ್ತು.
(ಏಜನ್ಸೀಸ್)












Click it and Unblock the Notifications