ರೈಲ್ವೆ ಬಜೆಟ್‌ನಲ್ಲಿ ಅನ್ಯಾಯ : ಶುಕ್ರವಾರ ಬಳ್ಳಾರಿ ಬಂದ್
ಬಳ್ಳಾರಿ : ರೈಲ್ವೆ ಬಜೆಟ್‌ನಲ್ಲಿ ಬಳ್ಳಾರಿ ವಲಯಕ್ಕೆ ಆದ್ಯತೆ ಸಿಗದಿರುವುದನ್ನು ಖಂಡಿಸಿ, ಬಳ್ಳಾರಿ ರೈಲ್ವೆ ಕ್ರಿಯಾ ಸಮಿತಿ ಮಾರ್ಚ್ 2ರಂದು ಬಳ್ಳಾರಿ ಬಂದ್‌ಗೆ ಕರೆ ನೀಡಿದೆ.
ಬಳ್ಳಾರಿ ರೈಲ್ವೆ ವಲಯಕ್ಕೆ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ನೀಡದಿರುವ ಕೇಂದ್ರ ಸರ್ಕಾರ, ರೈಲ್ವೆ ವಿಭಾಗ ಹಾಗೂ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ವಿರುದ್ಧ ಭಾರಿ ಪ್ರತಿಭಟನೆ ಮಾಡಲು ನಿರ್ಧರಿಸಿದೆ.
ಅಗತ್ಯ ಸೌಲಭ್ಯ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಕನ್ನಡಪರ ಸಂಘಟನೆಗಳು, ಹಿರಿಯ ನಾಗರಿಕರು, ಸಮಾಜ ಸೇವಕರು ತಮ್ಮ ಬೆಂಬಲ ಸೂಚಿಸಿದ್ದಾರೆ ಎಂದು ರೈಲ್ವೆ ಕ್ರಿಯಾ ಸಮಿತಿಯ ಮುಖ್ಯಸ್ಥರು ಸುದ್ದಿಗಾರರಿಗೆ ಹೇಳಿದ್ದಾರೆ.
ಬಂದ್ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ : 08392 -275 544 ಅಥವಾ 94488 39759.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications