ಶಿವ ಕರುಣೆ ಹಿರಿದು;ನೆಲಮಂಗಲದಿ ತಪ್ಪಿದ ಅನಾಹುತ!
ಬೆಂಗಳೂರು : ಶಿವರಾತ್ರಿ ದಿನ ಅನಾಹುತ ಮಾಡಲು ರೂಪಿಸಲಾಗಿದ್ದ ದುಷ್ಕರ್ಮಿಗಳ ಸಂಚು ವಿಫಲವಾಗಿದೆ. ನೆಲಮಂಗಲ ಪೊಲೀಸರ ಕಾರ್ಯಾಚರಣೆ ಫಲಿಸಿದ್ದು, ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ನೆಲಮಂಗಲದ ಅಡಿಕಿಮಾರನಹಳ್ಳಿ ಬಯಲು ಆಂಜನೇಯ ಸ್ವಾಮಿ ದೇಗುಲದ ಬಳಿಯಿರುವ ಪೊದೆಯಲ್ಲಿ ಬಚ್ಚಿಡಲಾಗಿದ್ದ ನಾಲ್ಕು ಬಾಂಬುಗಳು, ಗುಂಡು, ನಾಡ ಪಿಸ್ತೂಲು, ಮಂಕಿಟೋಪಿ ಮತ್ತಿತರ ವಸ್ತುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಶಿವರಾತ್ರಿ ಹಿನ್ನೆಲೆಯಲ್ಲಿ ಇಲ್ಲಿನ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ. ಆ ಸಂದರ್ಭದಲ್ಲಿ ದುಷ್ಕೃತ್ಯ ನಡೆಸುವ ಹುನ್ನಾರ ನಡೆದಿರಬಹುದೇ ಎನ್ನುವ ಅನುಮಾನದ ಬೆನ್ನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications