ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ ರಾಜಾರಾವ್‌ ಸೇರಿದಂತೆ 121ಮಂದಿಗೆ ಪದ್ಮ ಪ್ರಶಸ್ತಿ

By Staff
|
Google Oneindia Kannada News

ನವದೆಹಲಿ : ಖುಷವಂತ್‌ ಸಿಂಗ್‌, ಭಗವತಿ ಮತ್ತಿತರ ಗಣ್ಯರಿಗೆ ಪ್ರಸಕ್ತ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ಪದ್ಮ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. 10ಮಂದಿಗೆ ಪದ್ಮ ವಿಭೂಷಣ, 32ಮಂದಿಗೆ ಪದ್ಮಭೂಷಣ, 79ಮಂದಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಈ ವರ್ಷ ಯಾರಿಗೂ ಭಾರತರತ್ನ ಪ್ರಶಸ್ತಿಯನ್ನು ಪ್ರಕಟಿಸಿಲ್ಲ.

ಪ್ರಮುಖ ಪದ್ಮ ವಿಭೂಷಣ ಪುರಸ್ಕೃತರು : ಬಾಲು ಶಂಕರನ್‌, ಫಾಲಿ ಎಸ್‌.ನಾರಿಮನ್‌, ಖುಷವಂತ್‌ ಸಿಂಗ್‌, ಎನ್‌.ಎನ್‌.ವೋಹ್ರಾ, ಪಿ.ಎನ್‌.ಭಗವತಿ, ರಾಜಾರಾವ್‌, ರಾಜಾ ಜೇಸುದಾಸ್‌ ಚೆಲ್ಲಯ್ಯ, ವೆಂಕಟರಾಮನ್‌ ಕೃಷ್ಣಮೂರ್ತಿ.

ಪ್ರಮುಖ ಪದ್ಮ ಭೂಷಣ ಪುರಸ್ಕೃತರು : ಇಳಾ ಗಾಂಧಿ, ರೆ.ಫಾ.ಗೇಬ್ರಿಯಲ್‌, ಇಂದ್ರಾ ನೂಯಿ, ಜಮ್‌ಷೆಡ್‌ ಜೆ. ಇರಾನಿ, ಕೆ.ಟಿ.ಥಾಮಸ್‌, ಮಂಜು ಶರ್ಮಾ, ಒ.ಸುಜುಕಿ, ಸಾಜನ್‌ ಮತ್ತು ರಾಜನ್‌ ಮಿಶ್ರಾ, ಸುನೀಲ್‌ ಭಾರ್ತಿ ಮಿತ್ತಲ್‌( ಏರ್‌ಟೆಲ್‌ ಮುಖ್ಯಸ್ಥ), ವಿ.ಮೋಹಿನಿ ಗಿರಿ.

ಪ್ರಮುಖ ಪದ್ಮ ಶ್ರೀ ಪುರಸ್ಕೃತರು : ಗೀತಾ ಚಂದ್ರನ್‌, ಮಿಲ್ಕಾ ಸಿಂಗ್‌, ಕೊನೇರು ಹಂಪಿ, ಕಿರಣ್‌ ಕಾರ್ನಿಕ್‌, ರೆಮೋ ಫರ್ನಾಂಡಿಸ್‌, ತೀಸ್ತಾ ಸೆಟಲ್‌ವಾಡ್‌. ಸುಕುಮಾರ್‌ ಅಜಿಕೋಡ್‌, ವಿಕ್ರಂ ಸೇಠ್‌.

ಕನ್ನಡಿಗರತ್ತ ನಿರ್ಲಕ್ಷ್ಯ : ‘ಕಾಂತಪುರ’ ಖ್ಯಾತಿಯ ಸಾಹಿತಿ ಹಾಸನ ರಾಜಾರಾವ್‌ಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಭಾರತರತ್ನ ಪ್ರಶಸ್ತಿಗೆ ಕರ್ನಾಟಕದಿಂದ ಮೂವರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಆದರೆ ಕೇಂದ್ರ ಮಾನ್ಯತೆ ನೀಡಿಲ್ಲ.

(ಏಜನ್ಸೀಸ್‌ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X