ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಪೋರ್ಟ್‌, ಇನ್ಫೋಸಿಸ್‌ ಸಿಡಿಸಲು‘ಉಗ್ರ’ ಹುನ್ನಾರ

By Staff
|
Google Oneindia Kannada News

ಬೆಂಗಳೂರು : ನಗರದ ಹೊರವಲಯದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರಗಾಮಿಯು, ಇನ್ಫೋಸಿಸ್‌ ಮತ್ತು ವಿಮಾನ ನಿಲ್ದಾಣದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಎಂಬ ಸಂಗತಿ ಶುಕ್ರವಾರ ಬಯಲಾಗಿದೆ.

ಶಂಕಿತ ಉಗ್ರನನ್ನು ಬಂಧಿಸುವ ಮೂಲಕ, ಪೊಲೀಸರು ದಾಳಿ ಪ್ರಯತ್ನಗಳನ್ನು ವಿಫಲಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶಂಕಿತ ಉಗ್ರಗಾಮಿಯನ್ನು ಇಮ್ರಾನ್‌ ಅಲಿಯಾಸ್‌ ಬಿಲಾಲ್‌ ಎಂದು ಗುರ್ತಿಸಲಾಗಿದೆ. ಸುಮಾರು 32ವರ್ಷದ ಈ ವ್ಯಕ್ತಿಯಿಂದ ಎ.ಕೆ.47, ನಾಲ್ಕು ಎಕೆ-47 ನಿಯತಕಾಲಿಕಗಳು, ಸಿಮ್‌ ಕಾರ್ಡ್‌ಗಳು, ಉಪಗ್ರಹ ದೂರವಾಣಿ, ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಐಜಿಪಿ ಕೆ.ಆರ್‌.ಶ್ರೀನಿವಾಸನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಶಂಕಿತ ಉಗ್ರನ ಬಳಿ ಸಿಕ್ಕಿರುವ ನಕ್ಷೆಯಲ್ಲಿ ಇನ್ಫೋಸಿಸ್‌ ಮತ್ತು ಬೆಂಗಳೂರು ವಿಮಾನ ನಿಲ್ದಾಣವನ್ನು ಮಾರ್ಕ್‌ ಮಾಡಲಾಗಿದೆ. ಈತನ ಇನ್ನಿತರ ಸಹಚರರನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆದಿವೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X