ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಕನ್ನಡ ಡಿಂಡಿಮ

By Staff
|
Google Oneindia Kannada News

ಬೆಂಗಳೂರು : ಸುವರ್ಣ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಬುಧವಾರ ಸಂಜೆ 6ಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

35ರಿಂದ 40ಸಾವಿರ ಮಂದಿ ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮಾರಂಭದ ಉದ್ಘಾಟನೆಗೂ ಮುನ್ನ ಅಂದರೆ ಸಂಜೆ 5ಕ್ಕೆ ವೈಮಾನಿಕ ಪ್ರದರ್ಶನ ನಡೆಯಲಿದೆ. ರಾಜ್ಯಪಾಲ ಟಿ.ಎನ್‌.ಚತುರ್ವೇದಿ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸುವರು. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು.

ಸಮಾರಂಭದ ವಿಶೇಷಗಳು ಹೀಗಿವೆ :

  • ಸಮಾರಂಭ ನಡೆಯಲಿರುವ ವೇದಿಕೆಯ ಉದ್ದ 100ಅಡಿ. ಅಗಲ 60ಅಡಿ.
  • 3500 ವಿದ್ಯಾರ್ಥಿಗಳು ಮತ್ತು 500 ಕಲಾವಿದರಿಂದ ಸಮೂಹ ನೃತ್ಯಕ್ಕೆ ಹೆಜ್ಜೆ.
  • ಕಲಾವಿದೆ ಮಾಯಾರಾವ್‌ ನಿರ್ದೇಶನದಲ್ಲಿ ನೃತ್ಯ ರೂಪಕ(ಸುವರ್ಣ ಕರ್ನಾಟಕ).
  • ಗತ ಇತಿಹಾಸದ ಘಟನೆಗಳನ್ನು ನೆನಪಿಸುವ ಲೇಸರ್‌ ಪ್ರದರ್ಶನ.
  • ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗೆ ನಟ ಶಿವರಾಜ ಕುಮಾರ್‌ರಿಂದ ಹೆಜ್ಜೆ.
  • ಬಾಣ ಬಿರುಸುಗಳಿಂದ ಸಂಭ್ರಮ ಆಚರಣೆ.
  • ರಾಜ್ಯೋತ್ಸವ ಮತ್ತು ಏಕೀಕರಣ ಪ್ರಶಸ್ತಿ ಪ್ರದಾನ.
  • ಪಾಸ್‌ ಇದ್ದವರಿಗಷ್ಟೇ ಪ್ರವೇಶ.
ಸುವರ್ಣ ಕರ್ನಾಟಕದ ಅಂಗವಾಗಿ ರಾಜ್ಯದಲ್ಲಿ ನಡೆಯಲಿರುವ ಚಟುವಟಿಕೆಗಳ ಮಾಹಿತಿಗಾಗಿ ಭೇಟಿ ನೀಡಿ - http://www.suvarnakarnataka.kar.nic.in/index.asp

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X