ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುವರ್ಣ ಕರ್ನಾಟಕ : 46ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

By Staff
|
Google Oneindia Kannada News

Kannada Rajyotsava awardees - Venkatesh Prasad, Arundhatinag, Dwarakishಬೆಂಗಳೂರು : ಅರುಂಧತಿ ನಾಗ್‌, ಪದ್ಮಿನಿರಾವ್‌, ವೆಂಕಟೇಶ್‌ ಪ್ರಸಾದ್‌, ಕೃಪಾಕರ್‌, ಸೇನಾನಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 46ಗಣ್ಯರಿಗೆ ಮತ್ತು ನಾಲ್ಕು ಸಂಘಟನೆಗಳಿಗೆ ಈ ಸಲದ ರಾಜ್ಯೋತ್ಸ ವ ಪ್ರಶಸ್ತಿ ಸಂದಿದೆ.

ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದು, ಅಂತಿಮ ಕ್ಷಣದಲ್ಲಿ ಪಟ್ಟಿ ಉದ್ದವಾದರೆ ಆಚ್ಚರಿಯೇನಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ವರ್ಷ ಪ್ರಶಸ್ತಿಗಾಗಿ ಒಂದು ಸಾವಿರ ಅರ್ಜಿಗಳು ಬಂದಿದ್ದವು. 20 ಗ್ರಾಂ ಚಿನ್ನದ ಪದಕವನ್ನು ಪ್ರಶಸ್ತಿ ಒಳಗೊಂಡಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ. 1ರಂದು ಸಂಜೆ ನಡೆಯಲಿರುವ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.

ಪ್ರಶಸ್ತಿ ವಿಜೇತರ ವಿವರ :

ಸಾಹಿತ್ಯ :

ವಸಂತ ಕುಷ್ಟಗಿ(ಗುಲ್ಬರ್ಗ)
ಏರ್ಯ ಲಕ್ಷ್ಮೀನಾರಾಯಣ ಆಳ್ವ(ದಕ್ಷಿಣ ಕನ್ನಡ)
ವಿಷ್ಣುನಾಯ್ಕ (ಉತ್ತರ ಕನ್ನಡ)
ಡಾ। ಕಾಳೇಗೌಡ ನಾಗವಾರ(ಬೆಂಗಳೂರು ಗ್ರಾಮಾಂತರ)

ರಂಗಭೂಮಿ :

ಸುಮಿತ್ರಮ್ಮ ಕುಂದಾಪುರ(ಉಡುಪಿ)
ಟಿ.ಎಸ್‌.ಲೋಹಿತಾಶ್ವ(ತುಮಕೂರು)
ಅರುಂಧತಿ ನಾಗ್‌(ಬೆಂಗಳೂರು)
ಶ್ರೀಪತಿ ಮಂಜನಬೈಲು(ಬೆಳಗಾವಿ)

ಜಾನಪದ :

ಡಾ । ಹಿ.ಶಿ. ರಾಮಚಂದ್ರೇಗೌಡ(ಹಾಸನ)
ಮಾಸ್ತಮ್ಮ(ಜನಪದ ವೈದ್ಯೆ, ಮೈಸೂರು)
ಗೋಪಾಲಕೃಷ್ಣ ಕುರುಪ್‌(ದಕ್ಷಿಣ ಕನ್ನಡ)
ಗಂಗಾಧರಗೌಡ (ತುಮಕೂರು)

ಲಲಿತ ಕಲೆ :

ರೇಖಾರಾವ್‌(ಬೆಂಗಳೂರು)
ಜೆ.ಎಂ.ಎಸ್‌. ಮಣಿ(ಬೆಂಗಳೂರು)

ಸಂಗೀತ :

ತುಕಾರಾಂ ಸಾ ವಿಠಲ್‌ ಸಾ.ಕಬಾಡಿ (ಧಾರವಾಡ)
ಪಂಡಿತಂ ನಾಗನಾಥ್‌ ಒಡೆಯರ್‌ (ಹುಬ್ಬಳ್ಳಿ)
ವಿ.ಎಂ.ರಾಮದಾಸ್‌ (ಬೆಂ. ಗ್ರಾಮಾಂತರ)
ಸಂಗೀತಾ ಕಟ್ಟಿ (ಧಾರವಾಡ)

ವೈದ್ಯಕೀಯ :

ಡಾ.ಬಿ.ಟಿ. ಚಿದಾನಂದಮೂರ್ತಿ (ಹೊಸದೆಹಲಿ)
ಡಾ.ದೇವಧರ್‌ (ಹಾವೇರಿ)
ಡಾ.ವಸಿಷ್ಠ (ಬೆಂಗಳೂರು)

ಚಲನಚಿತ್ರ :

ದ್ವಾರಕೀಶ್‌ (ಬೆಂಗಳೂರು)
ಹಂಸಲೇಖ (ಮಂಡ್ಯ)
ಎಸ್‌.ದೊಡ್ಡಣ್ಣ (ಬೆಂಗಳೂರು)
ಎಸ್‌.ನಾರಾಯಣ (ಬೆಂಗಳೂರು)

ಪತ್ರಿಕೋದ್ಯಮ :

ಕೆ.ಎನ್‌.ಶಾಂತಕುಮಾರ್‌ (ಬೆಂಗಳೂರು)
ಜಿ.ಎಸ್‌.ಸದಾಶಿವ (ಬೆಂಗಳೂರು)
ಶ್ಯಾಮಸುಂದರ್‌ (ಬಳ್ಳಾರಿ)

ಕ್ರೀಡೆ :

ವೆಂಕಟೇಶ್‌ ಪ್ರಸಾದ್‌ (ಕ್ರಿಕೆಟ್‌, ಬೆಂಗಳೂರು)
ರಾಬಿನ್‌ ಉತ್ತಪ್ಪ (ಕ್ರಿಕೆಟ್‌, ಕೊಡಗು)

ಕಾನೂನು :

ಸಿ.ಎಚ್‌.ಹನುಮಂತರಾಯ (ಬೆಂಗಳೂರು)
ಎಚ್‌.ಗಂಗಾಧರನ್‌ (ಮೈಸೂರು)

ಸಮಾಜಸೇವೆ :

ಎಚ್‌.ಜಿ. ಗೋವಿಂದೇಗೌಡ (ಚಿಕ್ಕಮಗಳೂರು)
ರುಡ್‌ಸೆಟ್‌ (ಧರ್ಮಸ್ಥಳ, ದಕ್ಷಿಣ ಕನ್ನಡ)
ಚೂರ್ಡಿಯ ಚಾರಿಟಬಲ್‌ ಟ್ರಸ್ಟ್‌ (ಬೆಂಗಳೂರು)

ಮಾನವಿಕ : ಕೆ.ಪುಟ್ಟಸ್ವಾಮಯ್ಯ (ಅರ್ಥಶಾಸ್ತ್ರಜ್ಞ)
ಛಾಯಾಗ್ರಹಣ : ಕೃಪಾಕರ್‌ ಮತ್ತು ಸೇನಾನಿ (ಮೈಸೂರು)
ವಿಜ್ಞಾನ ಮತ್ತು ತಂತ್ರಜ್ಞಾನ : ಪ್ರೊ.ಎಂ.ಕೆ.ಸೂರಪ್ಪ (ಬೆಂಗಳೂರು)
ಹೊರದೇಶ ಕನ್ನಡ ಸಂಘ : ಅಬುದಾಬಿ ಕನ್ನಡ ಸಂಘ
ಹೊರನಾಡ ಕನ್ನಡ ಸಂಘ : ಕರ್ನಾಟಕ ಸಂಘ, ಮುಂಬೈ
ನೀರಾವರಿ ತಜ್ಞ : ಡಿ.ಎನ್‌. ದೇಸಾಯಿ (ಬೆಂಗಳೂರು)
ವಿದ್ವಾಂಸರು : ಎ.ವಿ.ಸೋಮನಾಥ್‌ ದೀಕ್ಷಿತ್‌ (ಚಿಕ್ಕಮಗಳೂರು)
ಸಮೂಹ ಮಾಧ್ಯಮ : ಡಾ.ಮಹೇಶ್‌ ಜೋಷಿ (ದೂರದರ್ಶನ ನಿರ್ದೇಶಕ, ಬೆಂಗಳೂರು)
ಯುವಜನ ಸೇವಾ ಶಿಕ್ಷಣ : ಪ್ರೊ.ಕೆ.ಆರ್‌. ಸುಶೀಲೆಗೌಡ (ಹಾಸನ)
ಕಲಾ ವಿಮರ್ಶೆ : ಸದಾನಂದ ಕನವಳ್ಳಿ (ಧಾರವಾಡ)
ಕರಕುಶಲ ಕಲೆ : ಶಾ.ರಷೀದ್‌ ಅಹಮ್ಮದ್‌ ಖಾದ್ರಿ (ಬೀದರ್‌)
ಶಿಕ್ಷಣ : ಪ್ರಭಾಕರ ಕೋರೆ (ಬೆಳಗಾವಿ)
ಶಿಲ್ಪ ಕಲೆ : ಮಲ್ಲೋಜ ಮಯಾಚಾರ್‌ (ಶಿಲ್ಪಿ, ಬಾಗಲಕೋಟೆ)
ನೃತ್ಯ : ಪದ್ಮಿನಿ ರಾವ್‌ (ಬೆಂಗಳೂರು)
(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X