ಅ.15ರಂದು ಮುಂಬಯಿ-ಪುಣೆ ಕನ್ನಡಿಗರ ಕನ್ನಡ ಕಲರವ
ಬೆಂಗಳೂರು : ಮುಂಬಯಿ ಕರ್ನಾಟಕ ಸಂಘ, ಕನ್ನಡ ಸಾಹಿತ್ಯ ಡಾಟ್‌ಕಾಮ್ ಬೆಂಬಲಿಗರ ಬಳಗ ಮುಂಬಯಿ-ಪುಣೆ ಇವರ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿದೆ.
ಅಕ್ಟೋಬರ್ 15ರಂದು ಬೆಳಗ್ಗೆ 10.30ಕ್ಕೆ ಸಂಘದ ಸಭಾಗೃಹದಲ್ಲಿ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಖ್ಯಾತ ರಂಗ ತಜ್ಞ ಜಯದೇವ ಹತ್ತಂಗಡಿ ಉದ್ಘಾಟನೆ ನೆರವೇರಿಸುವರು. ಕರ್ನಾಟಕ ಸಂಘದ ಮನೋಹರ ಎಂ.ಕೋರಿ ಅಧ್ಯಕ್ಷತೆ ವಹಿಸುವರು. ಸಿನಿಮಾ ನಿರ್ದೇಶಕ ಸದಾನಂದ ಸುವರ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಚಂದ್ರಶೇಖರ್ ವಿ.(ಶೇಖರ್‌ಪೂರ್ಣ) ಆಶಯ ಭಾಷಣ ಮಾಡುವರು.
ಕಾರ್ಯಕ್ರಮದ ಮುಖ್ಯಾಂಶಗಳು :
- 12.30ರಿಂದ 1.30ರ ತನಕ ಮೊದಲ ಗೋಷ್ಠಿ ನಡೆಯಲಿದೆ. ‘ಭಾಷೆ ಸಂಸ್ಕೃತಿ ಮತ್ತು ಸಂವಹನ ಮಾಧ್ಯಮಗಳು ’ ಬಗ್ಗೆ ಕಮಲಾಕರ ದೀಕ್ಷಿತ್, ‘ಸೃಜನಶೀಲತೆ ಅಭಿವ್ಯಕ್ತಿಗೆ ಮಾಹಿತಿ ತಂತ್ರಜ್ಞಾನದ ಬಳಕೆ ’ಬಗ್ಗೆ ಕತೆಗಾರ್ತಿ ಮಿತ್ರಾ ವೆಂಕಟರಾಜ್ ಮಾತನಾಡುವರು.
- 1.30ರಿಂದ 2.30ರವರೆಗೆ ಭೋಜನ ವಿರಾಮವಿದ್ದು, 2.30ರಿಂದ 3ರವರೆಗೆ ಎರಡನೇ ಗೋಷ್ಠಿ ನಡೆಯಲಿದೆ. ಡಿಜಿಟಲ್ ಮಿಡಿಯಾ ಮೂಲಕ ಪ್ರಾದೇಶಿಕ ಸಂಸ್ಕೃತಿ ಅಭಿವ್ಯಕ್ತಿ ಬಗ್ಗೆ ಚಲನಚಿತ್ರ ನಿರ್ದೇಶಕ ಪಿ.ಎನ್.ರಾಮಚಂದ್ರ ಮಾತನಾಡುವರು.
- ಮಧ್ಯಾಹ್ನ 3ರಿಂದ 4ರವರೆಗೆ ಪ್ರಾತ್ಯಕ್ಷಿಕೆ ಮತ್ತು ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದೆ. 4ರಿಂದ 4.30ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಸಿನಿಮಾ ನಿರ್ದೇಶಕ ಹೇಮಂತ ಹೆಗಡೆ ಪಾಲ್ಗೊಳ್ಳುವರು.
- ಈ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ವಿವರಗಳಿಗೆ ಸಂಘದ ಉಪಾಧ್ಯಕ್ಷ ಭರತ್ ಕುಮಾರ್ ಪೊಲಿಪು, ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್, ಬಿ. ಚಿದಾನಂದ, ಕನ್ನಡ ಸಾಹಿತ್ಯ ಡಾಟ್‌ಕಾಮ್‌ನ ರೋಹಿತ್([email protected])ರನ್ನು ಸಂಪರ್ಕಿಸಬಹುದು.
- ಈ ಶುಭಘಳಿಕೆಯಲ್ಲಿಯೇ, ಕರ್ನಾಟಕ ಸಂಘ, ಮುಂಬಯಿ ಮತ್ತು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಮುಂಬಯಿ-ಪುಣೆ ಬೆಂಬಲಿಗರ ಬಳಗದ ಉದ್ಘಾಟನೆಗೊಳ್ಳಲಿದೆ.
ನಂತರ ಗಿರೀಶ ಕಾರ್ನಾಡರ ನಾಟಕದಲ್ಲಿ ಸ್ತ್ರೀಪಾತ್ರ(ಮಮತಾ ರಾವ್), ಕನ್ನಡ ಕಲಿಯೋಣ ಬನ್ನಿ(ಡಾ.ಜಿ.ಎನ್.ಉಪಾಧ್ಯ), ಮುದ್ರಾ ವಿಜ್ಞಾನ ಮತ್ತು ಆರೋಗ್ಯ(ಸುಮನ್ ಚಿಪಳೂಣ್ಕರ್) ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಡಾ.ಸುನೀತಾ ಶೆಟ್ಟಿ, ಡಾ.ವ್ಯಾಸರಾವ್ ನಿಂಜೂರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕೃತಿಗಳ ಬಗ್ಗೆ ಭರತ್‌ಕುಮಾರ್ ಪೊಲಿಪು, ಈಶ್ವರ ಅಲೆವೂರು ಮಾತನಾಡುವರು. ಕರ್ನಾಟಕದ ಸಂಘದ ಅಧ್ಯಕ್ಷ ಮನೋಹರ ಎಂ.ಕೋರಿ ಅಧ್ಯಕ್ಷತೆ ವಹಿಸುವರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications