ಮೇ28ರಂದು ರಾಜ್ಯದಲ್ಲಿ ಕಾಮೆಡ್‌-ಕೆ ಪ್ರವೇಶ ಪರೀಕ್ಷೆ

ಮೇ28ರಂದು ರಾಜ್ಯದಲ್ಲಿ ಕಾಮೆಡ್‌-ಕೆ ಪ್ರವೇಶ ಪರೀಕ್ಷೆ
109 ಕೇಂದ್ರಗಳು ಸನ್ನದ್ಧ, ಅಕ್ರಮ ತಡೆಯಲು ಬಯೋ ಮೆಟ್ರಿಕ್‌ ವಿಧಾನ

ಬೆಂಗಳೂರು : ಕಾಮೆಡ್‌-ಕೆ ಪ್ರವೇಶ ಪರೀಕ್ಷೆ ಮೇ 28ರಂದು ರಾಜ್ಯಾದ್ಯಂತ 109 ಕೇಂದ್ರಗಳಲ್ಲಿ ನಡೆಯಲಿದೆ.

ಪರೀಕ್ಷೆ ಒಂದೇ ದಿನ ನಡೆಯಲಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಕಳುಹಿಸಲಾಗಿದೆ. ಪ್ರವೇಶ ಪತ್ರ ತಲುಪದಿದ್ದವರು, ಕಾಮೆಡ್‌-ಕೆ ವೆಬ್‌ಸೈಟ್‌ಗೆ ಅರ್ಜಿ ಸಂಖ್ಯೆ ನಮೂದಿಸಿ, ಪರೀಕ್ಷಾ ಕೇಂದ್ರದ ಮಾಹಿತಿ ಪಡೆಯ ಬೇಕು. ನಂತರ ಮೇ 27ರಂದು ಪರೀಕ್ಷಾ ಕೇಂದ್ರಗಳಲ್ಲೇ ಪ್ರವೇಶ ಪತ್ರದ ನಕಲು ಪಡೆಯಬಹುದು.

ಪರೀಕ್ಷಾ ಅಕ್ರಮ ತಡೆಯಲು ಬಯೋ ಮೆಟ್ರಿಕ್‌ ವಿಧಾನ ಅಳವಡಿಸಲಾಗಿದ್ದು, ಕಾಮೆಡ್‌-ಕೆ ಆಯ್ಕೆ ಬಯಸಿ ಪ್ರಸಕ್ತ ವರ್ಷ 69,116 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ವೈದ್ಯಕೀಯ ಹಾಗೂ ದಂತವೈದ್ಯಕೀಯದ ಆಕಾಂಕ್ಷಿಗಳು 15,307 ಮತ್ತು ಇಂಜಿನೀಯರಿಂಗ್‌ ಆಕಾಂಕ್ಷಿಗಳು 39,224.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+