ರಾಜ್ಯ ಬಿಜೆಪಿಯಿಂದ ದೂರವಾಗಲು ಜೆಡಿಯು ನಿರ್ಧಾರ?
ರಾಜ್ಯ ಬಿಜೆಪಿಯಿಂದ ದೂರವಾಗಲು ಜೆಡಿಯು ನಿರ್ಧಾರ?
ಜೆಡಿಯು ಸಂಘಟನೆಗಾಗಿ ಶರದ್‌ಯಾದವ್‌ರಿಂದ ಕರ್ನಾಟಕ ಪ್ರವಾಸ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡುತ್ತಿದ್ದ ಜೆಡಿಯು ರಾಜ್ಯಾಧ್ಯಕ್ಷ ಬಿ.ಸೋಮಶೇಖರ್ ಅವರು, ತಮ್ಮ ಪ್ರವಾಸ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಯಾದವ್ ಭೇಟಿ ಮಾಡಲಿದ್ದಾರೆ ಎಂದರು.
ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ರಾಜ್ಯದ ಮುಖಂಡರೊಂದಿಗೆ ಮಹತ್ವದ ಮಾತುಕತೆ ನಡೆಸುವ ಯಾದವ್, ರಾಜ್ಯ ಬಿಜೆಪಿಗೆ ಬೆಂಬಲ ಮುಂದುವರೆಸುವ ಬಗೆಗೆ ಚರ್ಚೆ ನಡೆಸಲಿದ್ದಾರೆ ಎಂದು ಸೋಮಶೇಖರ್ ಹೇಳಿದರು.
ರಾಜ್ಯ ಬಿಜೆಪಿ ಧೋರಣೆಯನ್ನು ಕಟುವಾಗಿ ಟೀಕಿಸಿದ ಅವರು, ಜೆಡಿಯು ಜೊತೆ ಕೈಜೋಡಿಸುವ ಮುನ್ನ, ಬಿಜೆಪಿ ಸೌಜನ್ಯಕ್ಕೂ ನಮ್ಮೊಂದಿಗೆ ಚರ್ಚಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
(ಯುಎನ್‌ಐ)
ಮುಖಪುಟ / ವಾರ್ತೆಗಳು












Click it and Unblock the Notifications