Virat Kohli: ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವುದಕ್ಕಿಂತ ಕ್ರಿಕೆಟ್ ಬಿಡುವುದೇ ಲೇಸು; ವಿರಾಟ್ ಕೊಹ್ಲಿ ಹೇಳಿಕೆ ಭಾರಿ ವೈರಲ್‌

Virat Kohli: ಐಪಿಎಲ್‌ನಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಇಂದಿಗೂ ಚರ್ಚೆಯಲ್ಲಿರುವಂತದ್ದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂತಹ ಯಾವುದೇ ನಿಯಮವಿಲ್ಲದ ಕಾರಣ, ಅನೇಕ ಕ್ರಿಕೆಟಿಗರು ಮತ್ತು ತರಬೇತುದಾರರು ಐಪಿಎಲ್‌ನಲ್ಲೂ ಈ ನಿಯಮ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ, ಬಿಸಿಸಿಐ ಮಾತ್ರ ಈ ನಿಯಮವನ್ನು ಕೈಬಿಡುವ ಯಾವುದೇ ಸೂಚನೆ ನೀಡಿಲ್ಲ.

ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೊಹ್ಲಿಯ ಸಹ ಆಟಗಾರನಾಗಿದ್ದ ಸ್ವಸ್ತಿಕ್ ಚಿಕಾರಾ, ವಿರಾಟ್ ಕೊಹ್ಲಿ ಬಗ್ಗೆ ಒಂದು ಕುತೂಹಲಕಾರಿ ವಿಷಯ ಹಂಚಿಕೊಂಡಿದ್ದರು. "ನಾನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವುದಕ್ಕಿಂತ ಕ್ರಿಕೆಟ್ ಬಿಡುವುದೇ ಲೇಸು," ಎಂದು ಕೊಹ್ಲಿ ಹೇಳಿದ್ದರು ಅಂತಾ ಚಿಕಾರಾ ತಿಳಿಸಿದ್ದರು.

Virat Kohli U-Turn on Impact Player Rule Amid Injury Sparks Fresh IPL Retirement Buzz Viral

ಎಲ್‌ಎಸ್‌ಜಿ ವಿರುದ್ಧ ಅಬ್ಬರಿಸಿದ್ದ ಕೊಹ್ಲಿ

ಬುಧವಾರ (ಏಪ್ರಿಲ್‌ 15) ಎಂ.ಚಿನ್ನಸ್ವಾಮಿಯಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಂತೆ ಕಂಡಿತು. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ, ಲಕ್ನೋ ತಂಡ ಬ್ಯಾಟಿಂಗ್ ಮಾಡುವಾಗ ಅವರು ಫೀಲ್ಡಿಂಗ್ ಮಾಡಲು ಬರದೆ ಮೈದಾನದಿಂದ ಹೊರಗುಳಿದಿದ್ದರು. ಆದರೆ, ಆರ್‌ಸಿಬಿ ಬ್ಯಾಟಿಂಗ್ ಮಾಡುವಾಗ ಅವರು ಮೈದಾನಕ್ಕೆ ಇಳಿದು 34 ಎಸೆತಗಳಲ್ಲಿ 49 ರನ್ ಸಿಡಿಸಿದರು. ಈ ಮೂಲಕ ಅವರು ಪರೋಕ್ಷವಾಗಿ ಇಂಪ್ಯಾಕ್ಟ್ ಪ್ಲೇಯರ್ ಮಾದರಿಯಲ್ಲೇ ಪಂದ್ಯದಲ್ಲಿ ಕಾರ್ಯನಿರ್ವಹಿಸಿದರು.

ಇಂಪ್ಯಾಕ್ಟ್ ಪ್ಲೇಯರ್ ವಿಚಾರದಲ್ಲಿ ಕೊಹ್ಲಿ ಯು-ಟರ್ನ್

ತಮ್ಮ ಗಾಯದ ಸಮಸ್ಯೆಯ ನಡುವೆಯೂ ತಂಡದ ಗೆಲುವಿಗಾಗಿ ಅವರು ಮೈದಾನಕ್ಕೆ ಇಳಿದದ್ದು, ಈ ಹಿಂದೆ ಅವರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ತಳೆದಿದ್ದ ಕಠಿಣ ನಿಲುವಿಗಿಂತ ಭಿನ್ನವಾಗಿತ್ತು. ಒಬ್ಬ ಪರಿಪೂರ್ಣ ಕ್ರಿಕೆಟಿಗನಾಗಿ 20 ಓವರ್‌ಗಳ ಕಾಲ ಮೈದಾನದಲ್ಲಿ ಇರಲು ಬಯಸುವ ಕೊಹ್ಲಿ, ತಂಡದ ಅನಿವಾರ್ಯತೆ ಮತ್ತು ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಯು-ಟರ್ನ್ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಸ್ವಸ್ತಿಕ್ ಚಿಕಾರಾ ಹೇಳಿದ್ದೇನು?

"ವಿರಾಟ್ ಭಯ್ಯಾ ಹೇಳಿದ್ದರು, ನಾನು ಕ್ರಿಕೆಟ್ ಆಡುವವರೆಗೂ ಸಂಪೂರ್ಣ ಫಿಟ್ ಆಗಿಯೇ ಇರುತ್ತೇನೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವುದಿಲ್ಲ. ಪೂರ್ತಿ 20 ಓವರ್‌ಗಳ ಕಾಲ ಫೀಲ್ಡಿಂಗ್ ಮಾಡಿ, ನಂತರ ಬ್ಯಾಟಿಂಗ್ ಮಾಡುತ್ತೇನೆ. ಯಾವ ದಿನ ನಾನು ಕೇವಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಬೇಕಾದ ಪರಿಸ್ಥಿತಿ ಬರುತ್ತದೆಯೋ, ಅಂದೇ ನಾನು ಕ್ರಿಕೆಟ್ ಬಿಟ್ಟುಬಿಡುತ್ತೇನೆ," ಎಂದು ಹೇಳಿದ್ದರು ಅಂತಾ ಚಿಕಾರ ಹೇಳಿದ್ದರು.

ಕೊಹ್ಲಿ ಅವರ ಈ ಮಾತುಗಳು ಆಟದ ಮೇಲಿದ್ದ ಹಿಡಿತ ಮತ್ತು ಕೇವಲ ಬ್ಯಾಟರ್ ಆಗಿ ಅಲ್ಲದೆ, ಒಬ್ಬ ಸಂಪೂರ್ಣ ಅಥ್ಲೀಟ್ ಆಗಿ ಮೈದಾನದಲ್ಲಿರಲು ಅವರು ಬಯಸುವ ಬದ್ಧತೆಯನ್ನು ಎತ್ತಿ ತೋರಿಸುತ್ತವೆ. ಆದರೆ, ಇತ್ತೀಚಿನ ಪಂದ್ಯದಲ್ಲಿ ಉಂಟಾದ ಗಾಯದ ಸಮಸ್ಯೆಯು ಅವರ ಈ ಕಠಿಣ ನಿಲುವನ್ನು ತುಸು ಸಡಿಲಗೊಳಿಸುವಂತೆ ಮಾಡಿದೆ. ಈ ನಡುವೆಯೂ ಕೊಹ್ಲಿ ಅವರಿಗೆ ಇದೇ ಕೊನೇ ಐಪಿಎಲ್‌ ಸೀಸನ್‌. ಬಳಿ ಅವರು ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+