ರಾಜಕೀಯ ದ್ವೇಷ : ಗುಲ್ಬರ್ಗ ಜಿ.ಪಂ.ಸದಸ್ಯನ ಕಗ್ಗೊಲೆ
ರಾಜಕೀಯ ದ್ವೇಷ : ಗುಲ್ಬರ್ಗ ಜಿ.ಪಂ.ಸದಸ್ಯನ ಕಗ್ಗೊಲೆ
ಮಂಗಲಗಿ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ, ರಾಜಶೇಖರ ಮಾಲಿ ಪಾಟೀಲ ಹತ್ಯೆ ಬಗ್ಗೆ ವಿಶೇಷ ತನಿಖೆ
ಮೃತರ ಸ್ವಗ್ರಾಮ ಮಂಗಲಗಿಯಲ್ಲಿ ಈ ಕೊಲೆ ನಡೆದಿದೆ. ಭಾನುವಾರ ರಾತ್ರಿ ರಾಜಶೇಖರ ಮಾಲಿ ಪಾಟೀಲ ಬಹಿರ್ದೆಸೆಗೆ ತೆರಳುತ್ತಿದ್ದಾಗ, 10-15 ಜನರ ಗುಂಪೊಂದು ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡ ಮಾಲಿಪಾಟೀಲರನ್ನು ಗುಲ್ಬರ್ಗಾದ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾರೆ.
ಮಾಲಿಪಾಟೀಲ ಜಾತ್ಯತೀತ ಜನತಾದಳ ಸದಸ್ಯರಾಗಿದ್ದರು. ಗ್ರಾಮದ ಮಧ್ಯ ವೃತ್ಯದಲ್ಲಿ ಈ ಘಟನೆ ನಡೆದಿದೆ. ರಾಜಕೀಯ ವೈಷಮ್ಯವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications