ವಿಮರ್ಶಕ ಡಾ.ಜಿ.ಎಸ್.ಆಮೂರ ಅವರಿಗೆ ಬೇಂದ್ರೆ ಪ್ರಶಸ್ತಿ
ವಿಮರ್ಶಕ ಡಾ.ಜಿ.ಎಸ್.ಆಮೂರ ಅವರಿಗೆ ಬೇಂದ್ರೆ ಪ್ರಶಸ್ತಿ
ಕವಿ ಮೇಲೆ ಪ್ರಭಾವಿಸಿದ ಪರಿಸರ ಸಂರಕ್ಷಣೆಯಾಗಲಿ : ಯು.ಆರ್.ಅನಂತಮೂರ್ತಿ...
ನಗರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ , 2004-05ನೇ ಸಾಲಿನ ಪ್ರಶಸ್ತಿಯನ್ನು ಡಾ.ಜಿ.ಎಸ್.ಆಮೂರ ಅವರಿಗೆ ಹಾಗೂ 2005-06ನೇ ಸಾಲಿನ ಪ್ರಶಸ್ತಿಯನ್ನು ಶಿವಮೊಗ್ಗದ ಕರ್ನಾಟಕ ಸಂಘಕ್ಕೆ ನೀಡಲಾಯಿತು. ಪ್ರಶಸ್ತಿ 25ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ಒಳಗೊಂಡಿದೆ.
ಖ್ಯಾತ ವಿಮರ್ಶಕರಾಗಿರುವ ಆಮೂರ ಕಾವ್ಯಕೃಷಿಯನ್ನೂ ಮಾಡಿದ್ದಾರೆ. ಬೇಂದ್ರೆ ಸಾಹಿತ್ಯ ಕುರಿತು ಅವರು ಬರೆದಿರುವ ಭುವನದ ಭಾಗ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿರುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರಶಸ್ತಿ ಪ್ರದಾನಮಾಡಿ ಮಾತನಾಡಿದ ಜ್ಞಾನಪೀಠ ಪುರಸ್ಕೃತ ಪ್ರೊ.ಯು.ಆರ್.ಅನಂತಮೂರ್ತಿ, ಬೇಂದ್ರೆಯವರ ಸಾಹಿತ್ಯ ಕೃಷಿ ಮಹಾಕಾವ್ಯವಿದ್ದಂತೆ. ಅದು ಕವಿ ಬೆಳೆದ ಪರಿಸರವನ್ನು ಚಿತ್ರಕ ಶಕ್ತಿಯಿಂದ ಪರಿಚಯಿಸುತ್ತದೆ. ಬೇಂದ್ರೆ ಸಾಹಿತ್ಯ ಸೇರಿದಂತೆ, ಅವರ ಮೇಲೆ ಪ್ರಭಾವ ಬೀರಿದ ನಗರದ ಕೆರೆ-ಕೊಳಗಳು ಹಾಗೂ ವಿವಿಧ ಸ್ಥಳಗಳನ್ನು ಸಂರಕ್ಷಿಸಬೇಕಿದೆ ಎಂದು ಕರೆ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications