ಕೃಷಿ ತಜ್ಞ ಸುಭಾಷ್‌ ಪಾಳೇಕಾರ್‌ಗೆ ‘ಬಸವ ಶ್ರೀ’ ಪ್ರಶಸ್ತಿ

ಕೃಷಿ ತಜ್ಞ ಸುಭಾಷ್‌ ಪಾಳೇಕಾರ್‌ಗೆ ‘ಬಸವ ಶ್ರೀ’ ಪ್ರಶಸ್ತಿ
ಅ.12ರಂದು ಮುರುಘರಾಜೇಂದ್ರ ಬೃಹನ್ಮಠದ ಪ್ರಶಸ್ತಿ ಪ್ರದಾನ,

ಚಿತ್ರದುರ್ಗ : ನಗರದ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ನೀಡಲಾಗುವ ಬಸವಶ್ರೀ ಪ್ರಶಸ್ತಿಗೆ ಖ್ಯಾತ ಕೃಷಿ ತಜ್ಞ ಸುಭಾಷ್‌ ಪಾಳೇಕಾರ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಹನ್ನೆರಡನೇ ಶತಮಾನದ ಶರಣರ ತತ್ವ, ಚಿಂತನೆ, ಅಂದಿನ ಸಾಮಾಜಿಕ ಅಂದೋಲನ ಹಾಗೂ ವಚನ ಸಾಹಿತ್ಯವನ್ನು ಕುರಿತು ವಿಶೇಷ ಅಧ್ಯಯನ ನಡೆಸಿ ಗ್ರಂಥ ರಚನೆ ಮಾಡುವ ವಿದ್ವಾಂಸರಿಗೆ ಮತ್ತು ಶರಣ ಸಿದ್ಧಾಂತವನ್ನು ಅನುಸರಿಸುವವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಸುಭಾಷ್‌ ಪಾಳೇಕಾರ್‌ ಅವರು ಕೃಷಿಯನ್ನೇ ತಮ್ಮ ಉಸಿರನ್ನಾಗಿಸಿಕೊಂಡು ಕೃಷಿಯಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಕೃಷಿಗೆ ಸಂಬಂಧಪಟ್ಟಂತೆ ಮರಾಠಿ ಭಾಷೆಯಲ್ಲಿ 24ಪುಸ್ತಕಗಳನ್ನು ಮತ್ತು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಈ ಸಾಧನೆಗೆ ಪ್ರಶಸ್ತಿ ಸಂದಿದೆ.

ಪಾಳೇಕಾರ್‌ ಅಪ್ಪಟ ದೇಶೀಯ ಮತ್ತು ಸ್ವಾವಲಂಭಿ ಕೃಷಿಯನು ್ನಅವರು ರೈತರಿಗೆ ಪರಿಚಯಿಸಿದ್ದಾರೆ. ಪರಂಪರಾಗತ ಭಾರತೀಯ ಕೃಷಿ ವಿಧಾನಗಳನ್ನು ಆಧುನಿಕ ವಿಜ್ಞಾನದ ನೆಲೆಯಲ್ಲಿ ಅವರು ಪರಿಶೋಧಿಸಿದ್ದಾರೆ.

ಈ ಹಿಂದೆ ಬಸವಶ್ರೀ ಪ್ರಶಸ್ತಿ ಡಾ.ಹೆಚ್‌.ಸುದರ್ಶನ್‌, ಅಣ್ಣಾ ಹಜಾರೆ, ಮೇಧಾ ಪಾಟ್ಕರ್‌ ದಲಾಯಿ ಲಾಮ, ಗದ್ದರ್‌ ಸೇರಿದಂತೆ ವಿವಿಧ ಗಣ್ಯರಿಗೆ ಸಂದಿತ್ತು.

ಈ ಪ್ರಶಸ್ತಿಯು 1ಲಕ್ಷ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅಕ್ಟೋಬರ್‌ 12ರಂದು ನಡೆಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+