ಮಾಗಡಿ ಬಳಿ ಬಸ್ ದುರಂತ : 17 ಮಂದಿ ವಿಧಿವಶ
ಮಾಗಡಿ ಬಳಿ ಬಸ್ ದುರಂತ : 17 ಮಂದಿ ವಿಧಿವಶ
13 ಜನ ಸ್ಥಳದಲ್ಲೇ ಸಾವು, ಪರಾರಿಯಾದ ಚಾಲಕ...
ಬೆಂಗಳೂರು-ಹುಲಿಯೂರುದುರ್ಗ ರಸ್ತೆಯ ಜಮಾಲ್‌ಸಾಬ್‌ಪಾಳ್ಯ ಎಂಬಲ್ಲಿ ಈ ದುರಂತ ಸಂಭವಿಸಿದೆ. ವೇಗವಾಗಿ ಹೊರಟಿದ್ದ ಬಸ್ಸು ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ತಪ್ಪಿದ ಬಸ್ಸು ಹಳ್ಳಕ್ಕೆ ಬಿದ್ದಿದೆ. ಆಗ 13ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಮಾಗಡಿ ಸರ್ಕಾರಿ ಆಸ್ಪತ್ರೆ, ಬೆಂಗಳೂರಿನ ನಿಮ್ಹಾನ್ಸ್ ಮತ್ತು ವಿಕ್ಟೋರಿಯಾ ಅಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚಾಲಕ ಅಪಘಾತದ ನಂತರ ಪರಾರಿಯಾಗಿದ್ದಾನೆ.
ಸ್ಥಳದಲ್ಲೇ ಮೃತಪಟ್ಟವರು:
ಬೆಟ್ಟಹಿಂದಲಪಾಳ್ಯದ ಗಿರೀಶ್(21), ಅಂಗರಹಳ್ಳಿಯ ತಮ್ಮಯ್ಯ(40), ಎಡವಾಣಿಯ ವೀರಮಾಸ್ತಿ(28), ಕುಮಾರ(26), ಮಾಚನಾಯಕನಹಳ್ಳಿಯ ರುದ್ರೇಶ(20), ದೊಡ್ಡಕೊಪ್ಪಲಿನ ಮಹೇಶ್(14), ಕುಣಿಗಲ್‌ನ ವಿಜಯ್‌ಕುಮಾರ್(30), ಅಡಕಮಾರನಹಳ್ಳಿಯ ದೇವರಾಜ್(30), ಮಾಗಡಿಯ ನಾಗರಾಜ್(40) ಮತ್ತವರ ಪುತ್ರಿ ರಕ್ಷಿತಾ(8), ಜಯಲಕ್ಷ್ಮಮ್ಮ(40), ದೇವಲಾಪುರ ಮುದ್ದಾಚಾರ್(70) ಮತ್ತು ನಾಗಮಂಗಲದ ಲೋಕೇಶ್(22).
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications