ನಮ್ಮ-ನಿಮ್ಮ ಚಾನೆಲ್ ಜೊತೆಗೆ ಕುಮಾರಣ್ಣನ ಚಾನೆಲ್
ನಮ್ಮ-ನಿಮ್ಮ ಚಾನೆಲ್ ಜೊತೆಗೆ ಕುಮಾರಣ್ಣನ ಚಾನೆಲ್
ಪ್ರಿಯ ವೀಕ್ಷಕರ ಮುಂದೆ ಮತ್ತೊಮ್ಮೆ ಚಾನೆಲ್‌ಗಳ ಸಮರ
ತಾವು ಆರಂಭಿಸಲಿರುವ ಕಸ್ತೂರಿ ಮೀಡಿಯಾಸ್ ಪ್ರೆೃವೇಟ್ ಲಿಮಿಟೆಡ್‌ವತಿಯಿಂದ ನೂತನ ಟೀವಿ ಚಾನೆಲ್‌ವೊಂದನ್ನು ಕುಮಾರಸ್ವಾಮಿ ಸ್ಥಾಪಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಾಜಿನಗರದ ಕೈಗಾರಿಕಾ ಪ್ರದೇಶದಲ್ಲಿ ಟೀವಿ ಚಾನೆಲ್ ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
25ಕೋಟಿ ರೂಪಾಯಿ ಬಂಡವಾಳದ ಕಸ್ತೂರಿ ಮೀಡಿಯಾಸ್ ಸಂಸ್ಥೆಯ ಆರಂಭದಿಂದ, 208 ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಇಷ್ಟು ದಿನ ಕನ್ನಡಿಗರದ್ದೇ ಆದ ಖಾಸಗಿ ಚಾನೆಲ್ ಇಲ್ಲ ಎಂಬ ಕೊರಗು ನಿವಾರಣೆಯಾಗಲಿದೆ.
ರಾಜಕೀಯ ಲೆಕ್ಕಾಚಾರ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಸನ್ ನೆಟ್‌ವರ್ಕ್ಸ್ ಒಡೆತನದ ಟೀವಿ ಚಾನೆಲ್‌ಗಳ ಮಾಲೀಕರಾದರೆ, ತಮಿಳುನಾಡು ಹಾಲಿ ಮುಖ್ಯಮಂತ್ರಿ ಜಯಲಲಿತಾ ಜಯಾ ಟಿವಿ ಮಾಲೀಕರು. ಇದೀಗ ಕುಮಾರಸ್ವಾಮಿ ಚಾನೆಲ್ ಆರಂಭಿಸುತ್ತಿರುವುದು, ರಾಜಕೀಯಕ್ಕೂ ಟಿವಿಗೂ ಬಿಡದ ನಂಟು ಎನ್ನುವಂತಾಗಿದೆ.
ಮತ್ತೊಂದು ಹೊಸ ಚಾನೆಲ್ : ರಿkುೕ ಟೀವಿ ಸಹಾ ಕನ್ನಡದಲ್ಲಿ ಹೊಸ ಚಾನೆಲ್ ಆರಂಭಿಸಲು ಸಿದ್ಧತೆ ನಡೆಸಿದೆ. ಕನ್ನಡದ ಖ್ಯಾತ ಕಥೆಗಾರ ಜಯಂತ ಕಾಯ್ಕಿಣಿ ಹೊಸ ಚಾನೆಲ್‌ನ ಸಾರಥ್ಯವಹಿಸಲಿದ್ದಾರೆ ಎನ್ನಲಾಗಿದೆ.
ಕೊಸರು : ನಿಮ್ಮ ಚಾನೆಲ್ ಎನ್ನುತ್ತಿದ್ದ ‘ಉದಯ’ ಸದ್ದಿಲ್ಲದೇ ತನ್ನ ಬೆಂಗಳೂರಿನ ಕಚೇರಿಗೆ ಬೀಗ ಜಡಿದಿದೆ. ನಮ್ಮ ಚಾನೆಲ್ ಎನ್ನುತ್ತಿರುವ ಈಟೀವಿಗೆ ಹೊಸ ಚಾನೆಲ್‌ಗಳು ಪೈಪೋಟಿ ನೀಡಲಿವೆಯೇ ಎಂಬುದನ್ನು ಕಾದು ನೋಡಬೇಕು.
ಕಾವೇರಿ, ಸುಪ್ರಪಾತ ಮತ್ತು ಐಸ್ ಚಾನೆಲ್‌ಗಳಂತೆ ಹೋದ ಪುಟ್ಟ ಬಂದ ಪುಟ್ಟ ಎನ್ನುವಂತಾಗದಿರಲಿ ಎನ್ನುವುದು ಕನ್ನಡಿಗರ ಕಿವಿಮಾತು.
(ಇನ್ಫೋ ವಾರ್ತೆ)
ಅಂದ ಹಾಗೇ ಪ್ರಿಯ ವೀಕ್ಷಕರೇ/ಓದುಗರೇ, ಕನ್ನಡ ಚಾನೆಲ್‌ಗಳು ನಿಜಕ್ಕೂ ಮಾಹಿತಿ-ಮನರಂಜನೆಯನ್ನು ಒದಗಿಸುತ್ತಿವೆಯೇ?
ಮುಖಪುಟ / ವಾರ್ತೆಗಳು












Click it and Unblock the Notifications