ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಟಿ ಎಫ್‌ಎಂ 91ರಲ್ಲಿ ಕನ್ನಡದ ಕಂಪು ತರಲು ಸಂಪು

By Staff
|
Google Oneindia Kannada News

ಸಿಟಿ ಎಫ್‌ಎಂ 91ರಲ್ಲಿ ಕನ್ನಡದ ಕಂಪು ತರಲು ಸಂಪು
ರೇಡಿಯೋ ಸಿಟಿ ಎಫ್‌ ಎಂ 91ರಲ್ಲಿ ಕನ್ನಡದ ಕಂಪು ಮೂಡಿಸಲು ಈ-ಕವಿ ಸೇರಿದಂತೆ ಕನ್ನಡ ಪರ ವೇದಿಕೆಗಳು ಮುಂದಾಗಿವೆ. ಎಚ್ಚರಿಕೆಯ ಮೊದಲ ಗಂಟೆ ಈಗಾಗಲೇ ಮೊಳಗಿದೆ ...

ರೇಡಿಯೋ ಸಿಟಿ ಎಫ್‌ಎಂ 91ರಲ್ಲಿ ಕನ್ನಡ ಕಾರ್ಯಕ್ರಮಗಳನ್ನು ನಿರ್ಲಕ್ಷ ಮಾಡುತ್ತಿರುವುದನ್ನು ಖಂಡಿಸಿ, ರಾಜಾಜಿನಗರದ ಶಾಸಕರಾದ ನೆ.ಲ.ನರೇಂದ್ರಬಾಬು ನೇತೃತ್ವದಲ್ಲಿ ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ (ಈ-ಕವಿ) ಮತ್ತು ಕನ್ನಡ ಯಾಹೂ ಗ್ರೋಪ್‌ ತಂಡಗಳು ಶನಿವಾರ(ಸೆ.17) ಪ್ರತಿಭಟನೆ ನಡೆಸಿದವು.

ಅಂದು ಬೆಳಗ್ಗೆ ರೇಡಿಯೋ ಸಿಟಿ ಕಛೇರಿಗೆ ನೂರಾರು ಸಾಫ್ಟ್‌ ವೇರ್‌ ಇಂಜಿನಿಯರ್‌ಗಳು ತೆರಳಿ, ರೇಡಿಯೋ ಸಿಟಿ ಆಡಳಿತ ವರ್ಗದವರೊಂದಿಗೆ ಸುಮಾರು 3 ಗಂಟೆಗಳ ಕಾಲ ಸುಧೀರ್ಘವಾಗಿ ಚರ್ಚಿಸಿ ಬೇಡಿಕೆಗಳನ್ನು ಸಲ್ಲಿಸಿದರು.

ಈ-ಕವಿ ಸಂಸ್ಥೆಯ ಬೇಡಿಕೆಗಳು ಈ ಕೆಳಗಿನಂತಿವೆ :

1. ಎಫ್‌ ಎಮ್‌ 91ರಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಆದ್ಯತೆ ತೀರಕಮ್ಮಿ ಇದೆ ಆದ್ದರಿಂದ ದಿನದ ಪ್ರೈಮ್‌ ಟೈಮ್‌ ನಲ್ಲಿ ಕನ್ನಡ ಕಾರ್ಯಕ್ರಮವನ್ನೇ ಪ್ರಸಾರ ಮಾಡಿ.

2. ಎಫ್‌ ಎಮ್‌ 91ರಲ್ಲಿ ಕನ್ನಡ ಕಾರ್ಯಕ್ರಮವನ್ನು ನಡೆಸಿಕೊಡುವವರ ಉಚ್ಛಾರಣೆ ತುಂಬ ಕೆಟ್ಟದಾಗಿರುವುದರಿಂದ ಸ್ಪಷ್ಟವಾಗಿ ಉಚ್ಛಾರಣೆ ಮಾಡುವಂತ ಕನ್ನಡಿಗರಿಗೆ ಅವಕಾಶಕೊಡಿ.

3. ಎಫ್‌ ಎಮ್‌ 91ರಲ್ಲಿ ಕೆಲವು ಕಾರ್ಯಕ್ರಮಗಳು ಕರ್ನಾಟಕದ ಸಂಸ್ಕೃತಿಗೆ ಹೊಂದುತ್ತಿಲ್ಲ ಅಂತಹ ಕಾರ್ಯಕ್ರಮಗಳನ್ನು ಈ ಕೂಡಲೇ ನಿಲ್ಲಿಸುವಂತದ್ದು.

4. ಎಫ್‌ ಎಮ್‌ 91 ರಲ್ಲಿ ಕನ್ನಡ, ಕರ್ನಾಟಕ, ಕನ್ನಡಿಗ ಇವುಗಳಿಗೆ ಸಂಬಂಧಪಟ್ಟ ಹಾಗು ಇಲ್ಲಿನ ಸ್ಥಳ, ಸಂಸ್ಕೃತಿ , ಹಬ್ಬ ಹರಿದಿನಗಳ ಕಾರ್ಯಕ್ರಮಗಳನ್ನು ಹೆಚ್ಚಾಗಿ ಪ್ರಸಾರ ಮಾಡುವುದು.

5. ಟ್ರಿಯ (ಟಿ.ಆರ್‌.ಐ.ಎ) ಆಕ್ಟ್‌ ಪ್ರಕಾರ ಎಫ್‌ ಎಮ್‌ 91ರವರು ಸ್ಥಳೀಯ ಭಾಷೆಗೆ ಆದ್ಯತೆ ಹಾಗು ಸ್ಥಳೀಯರಿಗೆ ಉದ್ಯೋಗಾವಕಾಶ ಕೊಡಬೇಕು.

ಮೇಲಿನ ಎಲ್ಲಾ ಬೇಡಿಕೆಗಳನ್ನು ಆಲಿಸಿದ ರೇಡಿಯೋ ಸಿಟಿ ಕಾರ್ಯಕ್ರಮ ನಿರ್ದೇಶಕಿ ನಿಶ ರವರು ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಪ್ರಯತ್ನಪಡುತ್ತೇವೆ ಎಂದು ಆಶ್ವಾಸನೆ ಕೊಟ್ಟರು.

ನರೇಂದ್ರಬಾಬು ನೇತೃತ್ವದ ಸಾಫ್ಟ್‌ ವೇರ್‌ ಇಂಜಿನೀಯರ್‌ ಗಳ ತಂಡವು ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಪಡುವುದಲ್ಲ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದರು, ತಪ್ಪಿದಲ್ಲಿ ಎಲ್ಲ ಕನ್ನಡಪರ ಸಂಘಟನೆಗಳನ್ನು ಒಂದುಗೂಡಿಸಿ ಧರಣಿ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿದೆ.


ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X