ರಾಷ್ಟ್ರೀಯ ತೋಟಗಾರಿಕೆ ಮಿಷನ್‌ಗೆ ಹಸಿರು ನಿಶಾನೆ
ರಾಷ್ಟ್ರೀಯ ತೋಟಗಾರಿಕೆ ಮಿಷನ್‌ಗೆ ಹಸಿರು ನಿಶಾನೆ
ಈಗಾಗಲೇ 83 ಕೋಟಿ ರೂಪಾಯಿ ಬಿಡುಗಡೆ, ಯೋಜನೆಗೆ 13 ಜಿಲ್ಲೆಗಳ ಆಯ್ಕೆ -ಆಲಂಗೂರು ಶ್ರೀನಿವಾಸ್
ಈ ಸಂಬಂಧ ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರಸ್ತಾವನೆಗೆ, ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ತೋಟಗಾರಿಕೆ ಸಚಿವ ಆಲಂಗೂರು ಶ್ರೀನಿವಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತೋಟಗಾರಿಕೆ ಮಿಷನ್ ಮೂಲಕ ಕೈಗೊಳ್ಳಲಾಗುವ ಚಟುವಟಿಕೆಗಳಿಗೆ, ಮೊದಲ ಕಂತಿನಲ್ಲಿ 83ಕೋಟಿ ರೂಪಾಯಿಗಳ ಅನುದಾನ ದೊರೆತಿದೆ . ಮಿಷನ್‌ನ ಪ್ರಥಮ ಸಭೆ ಸೆಪ್ಟೆಂಬರ್ 29ರಂದು ನಡೆಯಲಿದ್ದು, ಕಾರ್ಯ ಚಟುವಟಿಕೆಗಳ ರೂಪುರೇಷೆ ನಿರ್ಧರಿಸಲಾಗುವುದು ಎಂದರು.
ರೈತರಿಗೆ ತರಬೇತಿ ನೀಡುವುದಲ್ಲದೇ ರಫ್ತಿಗೆ ಉತ್ತೇಜನ ನೀಡಲಾಗುವುದು. ಇದಕ್ಕಾಗಿ 13 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆಲಂಗೂರು ಶ್ರೀನಿವಾಸ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications