ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಚಿತ್ರಗಳ ಗುಣಮಟ್ಟಕ್ಕೆ ಕಮಲಹಾಸನ್‌ ಮೆಚ್ಚುಗೆ

By Staff
|
Google Oneindia Kannada News

ಕನ್ನಡ ಚಿತ್ರಗಳ ಗುಣಮಟ್ಟಕ್ಕೆ ಕಮಲಹಾಸನ್‌ ಮೆಚ್ಚುಗೆ
ಡಬ್ಬಿಂಗ್‌ ಚಿತ್ರಗಳನ್ನು ಒಪ್ಪದೆ, ಮೂಲ ಚಿತ್ರವನ್ನೇ ಮೆಚ್ಚುವ ಕನ್ನಡಿಗರು ನಿಜಕ್ಕೂ ಪ್ರಬುದ್ಧರು

ಬೆಂಗಳೂರು : ಹದಿನೆಂಟು ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಕಡೆಗೂ ನಟಿಸಲು ಅವಕಾಶ ಸಿಕ್ಕಿತು ಎನ್ನುವ ಖುಷಿ ನನ್ನದು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಚಿತ್ರಗಳು ಗುಣಮಟ್ಟದಲ್ಲಿ ಮುಂದಿವೆ ಎಂದು ದಕ್ಷಿಣ ಭಾರತದ ಸುಪ್ರಸಿದ್ಧ ನಟ ಮತ್ತು ನಿರ್ದೇಶಕ ಕಮಲ ಹಾಸನ್‌ ಹೇಳಿದರು.

ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳಿನ ‘ಸತಿ ಲೀಲಾವತಿ’ ಚಿತ್ರವನ್ನು ಕನ್ನಡದಲ್ಲಿ ‘ರಾಧಾ ಶಾಮ ಭಾಮ’ ಹೆಸರಲ್ಲಿ ರಿಮೇಕ್‌ ಮಾಡಲಾಗುತ್ತಿದೆ. ಊರ್ವಶಿ, ಶ್ರುತಿ, ಡೈಸಿ ಬೋಪಣ್ಣ ತಾರಾಗಣದ ಈ ಚಿತ್ರನನ್ನ ಪಾಲಿಗೆ ಸವಾಲೆಂದರೆ ತಪ್ಪಾಗಲಾರದು ಎಂದರು.

ನಾನು ಮತ್ತು ರಮೇಶ್‌ ಇಬ್ಬರೂ ಸಹಾ ಕೆ.ಬಾಲಚಂದರ್‌ ಗರಡಿಯಲ್ಲಿ ಪಳಗಿದವರು. ಜೀವದ ಗೆಳೆಯ ರಮೇಶ್‌ ನಿರ್ದೇಶನದಲ್ಲಿ ನಟಿಸುತ್ತಿರುವುದು ನಿಜಕ್ಕೂ ಹರ್ಷವನ್ನುಂಟು ಮಾಡಿದೆ ಎಂದ ಕಮಲ ಹಾಸನ್‌, ಕರ್ನಾಟಕ ತಮಿಳುನಾಡಿಗೆ ಸಾಂಸ್ಕೃತಿಕವಾಗಿ ನಾನಾ ಕೊಡುಗೆಗಳನ್ನು ನೀಡಿದೆ. ಅದರಲ್ಲೂ ರಜನೀಕಾಂತ್‌ನಂತಹ ನಟನನ್ನು ಕರ್ನಾಟಕ ತಮಿಳುನಾಡಿಗೆ ನೀಡಿದೆ ಎಂದರು.

ನನ್ನ ಮಹತ್ವಾಕಾಂಕ್ಷೆಯ ಐತಿಹಾಸಿಕ ಚಿತ್ರ ‘ಮರುದ ನಾಯಗನ್‌’ಗೆ 30ನಿಮಿಷಗಳ ಸ್ಕಿೃಪ್ಟ್‌ ಸಿದ್ಧವಾಗಿದೆ. ಅದು ಪೂರ್ತಿಯಾಗಲು ಇನ್ನೂ 3-4ವರ್ಷಗಳು ಬೇಕಾಗಬಹುದು ಎಂದರು.
(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X