ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯದಿಂದ ರಾಜಕಾರಣದ ಅಂಗಳಕ್ಕೆ ದೇವನೂರು

By Staff
|
Google Oneindia Kannada News

ಸಾಹಿತ್ಯದಿಂದ ರಾಜಕಾರಣದ ಅಂಗಳಕ್ಕೆ ದೇವನೂರು
ಸರ್ವೋದಯ ಕರ್ನಾಟಕ: ರೈತಸಂಘ ಮತ್ತು ಡಿಎಸ್‌ಎಸ್‌ ರಾಜಕಾರಣ ಅನಾವರಣ

ಬೆಂಗಳೂರು : ಒಂದು ಕಡೆ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಬಿಜೆಪಿಗೆ ಬೈಬೈ ಹೇಳಿ, ಸಮಾಜವಾದಿ ಪಕ್ಷಕ್ಕೆ ರಾಜ್ಯದಲ್ಲಿ ವೇದಿಕೆಯನ್ನು ಸಜ್ಜುಗೊಳಿಸಲು ಯೋಚಿಸುತ್ತ್ತಿದ್ದರೆ, ಸಾಹಿತಿ ದೇವನೂರು ಮಹಾದೇವ (ಅವರ ಕಾದಂಬರಿಗಳು: ಕುಸುಮ ಬಾಲೆ, ಒಡಲಾಳ ಇತ್ಯಾದಿ) ಅಧ್ಯಕ್ಷತೆಯಲ್ಲಿ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿಯ ಒಂದು ಬಣ ಹೊಸ ಪ್ರಾದೇಶಿಕ ಪಕ್ಷಕ್ಕೆ ಚಾಲನೆ ನೀಡಲು ಮುಂದಾಗಿದೆ.

ರೈತ ಸಂಘದ ಕೆ.ಎಸ್‌.ಪುಟ್ಟಣ್ಣಯ್ಯ ಮತ್ತು ದಲಿತ ಸಂಘರ್ಷ ಸಮಿತಿಯ ಇಂದೂಧರ ಹೊನ್ನಾಪುರ ಹೊಸ ಪಕ್ಷದ ಕನಸು ಕಂಡಿದ್ದಾರೆ. ನಮ್ಮ ಪ್ರಯತ್ನಕ್ಕೆ ವಿವಿಧ ಸಂಘಟನೆಗಳ ಬೆಂಬಲವಿದೆ ಎಂದಿರುವ ಪುಟ್ಟಣ್ಣಯ್ಯ, ಪಕ್ಷಕ್ಕೆ ಶಕ್ತಿ ತುಂಬಲು ಮಾರ್ಚಿ 14ರಿಂದ ಏಪ್ರಿಲ್‌ 24ರವರೆಗೆ ರಾಜ್ಯದೆಲ್ಲೆಡೆ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪರ್ಯಾಯ ರಾಜಕಾರಣವಾಗಿ ‘ಸರ್ವೋದಯ ಕರ್ನಾಟಕ’ ಪಕ್ಷ ಮೇ.23ರ ಬುದ್ಧ ಪೂರ್ಣಿಮೆಯ ದಿನ ಅಸ್ತಿತ್ವಕ್ಕೆ ಬರಲಿದೆ. ಆ ಸಮಾವೇಶದಲ್ಲಿ ಹತ್ತು ಲಕ್ಷಕ್ಕಿಂತ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಪುಟ್ಟಣ್ಣಯ್ಯ ತಿಳಿಸಿದ್ದಾರೆ.

ಗುರುಪ್ರಸಾದ್‌ ಕೆರಗೋಡು ಪಕ್ಷದ ಪ್ರಣಾಳಿಕೆ ರಚನೆಯ ನೇತೃತ್ವವಹಿಸಿದ್ದು, ಪುಟ್ಟಣ್ಣಯ್ಯ ಪಕ್ಷದ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇತಿಹಾಸ ಹೇಳಿದ್ದು : ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಯಾವ ಪ್ರಾದೇಶಿಕ ಪಕ್ಷವೂ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ. ಪಕ್ಷಗಳು ಹೇಗೆ ಹುಟ್ಟಿಕೊಂಡವೋ ಹಾಗೇ ಸತ್ತುಹೋದುದು ಇತಿಹಾಸ. ಇತ್ತೀಚಿನ ಉದಾಹರಣೆಯೆಂದರೆ ವಿಜಯ ಸಂಕೇಶ್ವರ ಅವರ ಕನ್ನಡನಾಡು. ಇದೀಗ ಬರುತ್ತಿರುವ ರೈತಸಂಘ-ಡಿಎಸ್‌ಎಸ್‌ ಮೈತ್ರಿಯ ಸರ್ವೋದಯ ಕರ್ನಾಟಕದ ಕತೆ ಏನು?

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X